ಶ್ರೀಲಂಕಾ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿಬಿಟ್ಟಿದೆ.. ಜನರು ರಸ್ತೆಗಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ.. ಅತಿ ಕೆಟ್ಟ ಪರಿಸ್ಥಿತಿಗೆ ಶ್ರೀಲಂಕಾ ತಲುಪಿದೆ.. ಇದೀಗ ಸರ್ಕಾರಿ ನೌಕರರಿಗೆ ಸಂಬಳ ಪಾವತಿಸಲು ನೋಟು ಮುದ್ರಿಸಲು ಅನುಮತಿ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಶ್ರೀಲಂಕಾದ ನೂತನ ಪ್ರಧಾನ ಮಂತ್ರಿ ರಾನಿಲ್ ವಿಕ್ರಮಸಿಂಘೆ ಅವರು ಹೇಳಿದ್ದಾರೆ.
ಸದ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ನನಗೆ ಸತ್ಯವನ್ನು ಮರೆಮಾಚುವ ಮತ್ತು ಸಾರ್ವಜನಿಕರಿಗೆ ಸುಳ್ಳು ಹೇಳುವ ಇಚ್ಛೆಯಿಲ್ಲ. ಈ ವಿಚಾರಗಳು ಅಹಿತಕರ, ಭಯಾನಕವಾಗಿದ್ದರೂ ಅದನ್ನು ಹೇಳಲೇಬೇಕಾಗಿದೆ,
ಪ್ರಸ್ತುತ ಭಾರೀ ನಷ್ಟದಲ್ಲಿರುವ ಶ್ರೀಲಂಕನ್ ಏರ್ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಚಿಂತಿಸಿರುವುದಾಗಿ ಹೇಳಿದರು.
ಕಳೆದ ವರ್ಷ ಶ್ರೀಲಂಕಾ ಏರ್ಲೈನ್ಸ್ 960 ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಿದೆ. ನಾವು ಶ್ರೀಲಂಕನ್ ಏರ್ಲೈನ್ಸ್ ಅನ್ನು ಖಾಸಗೀಕರಣಗೊಳಿಸಿದರೂ, ನಮ್ಮ ಕಷ್ಟ ಬಗೆಹರಿಯುವುದಿಲ್ಲ. ವಿಮಾನದೊಳಗೆ ಎಂದಿಗೂ ಕಾಲೇ ಇಡದ ಮುಗ್ಧ ಜನರು ಈ ನಷ್ಟ ಭರಿಸಬೇಕಾಗಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ..








