ಮುಳುಗಿದ ಶ್ರೀಲಂಕಾ ರಾಸಾಯನಿಕ ತುಂಬಿದ್ದ ಹಡಗಿನಿಂದ ಪರಿಸರ ಮಾಲಿನ್ಯ : ವಿಶ್ವಸಂಸ್ಥೆ
ಶ್ರೀಲಂಕಾ : ಶ್ರೀಲಂಕಾದ ಕೊಲಂಬೋ ಬಂದರಿನಿಂದ ರಾಸಾಯನಿಕಗಳನ್ನು ಸಾಗಿಸುತ್ತಿದ್ದ ಹಡಗು ಬೆಂಕಿಯಿಂದ ಹೊತ್ತಿ ಉರಿದು ಸಮುದ್ರದಲ್ಲಿ ಮುಳುಗಿದೆ.. ಇದು ಇದೀಗ ಆತಂಕಕ್ಕೆ ಕಾರಣವಾಗಿದೆ.. ಸಿಂಗಾಪುರದ ಎಕ್ಸ್-ಪ್ರೆಸ್ ಫೀಡರ್ಸ್ ಸಂಸ್ಥೆಗೆ ಸೇರಿರುವ ಎಂವಿ ಎಕ್ಸ್-ಪ್ರೆಸ್ಪರ್ಲ್ ಎಂಬ ಹಡಗು ರಾಸಾಯನಿಕ ವಸ್ತುಗಳನ್ನು ಹೇರಿಕೊಂಡು ಕೊಲಂಬೋ ಬಂದರಿನಿಂದ ಹೊರಟಿತ್ತು.
ಕೊಲಂಬೋದಿಂದ 9.5 ನಾಟಿಕಲ್ ಮೈಲು ದೂರದಲ್ಲಿ ಮೇ ೨೦ರಂದು ಹಡಗಿಗೆ ಬೆಂಕಿ ಹತ್ತಿಕೊಂಡಿದ್ದು ವಿಶ್ವಸಂಸ್ಥೆಯ ತೈಲ ಮತ್ತು ರಾಸಾಯನಿಕ ಸ್ರಾವ ತಜ್ಞರ ತಂಡ ಸುಮಾರು ೧ ತಿಂಗಳು ನಡೆಸಿದ ಬೆಂಕಿ ನಂದಿಸುವ ಕಾರ್ಯಾಚರಣೆ ವಿಫಲವಾಗಿ ಹಡಗು ಜೂ.17 ರಂದು ಸಮುದ್ರದಲ್ಲಿ ಮುಳುಗಿದೆ.
ಈ ರೀತಿ ರಾಸಾಯನಿಕಗಳು ತುಂಬಿದ್ದ ಹಡಗು ಸಮುದ್ರದಲ್ಲಿ ಮುಳುಗಿರುವುದರಿಂದಾಗಿ ಪರಿಸರಕ್ಕೆ ಸೇರಿಕೊಳ್ಳುವ ಅಪಾಯಕಾರಿ ಅಂಶಗಳು ಭೂಮಿಗೆ ಹಾನಿ ಎಸಗಿವೆ ಎಂದು ಶ್ರೀಲಂಕಾದಲ್ಲಿನ ವಿಶ್ವಸಂಸ್ಥೆಯ ಪ್ರತಿನಿಧಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಕಾರ್ಯಾಚರಣೆಗೆ ತಗುಲಿದ ವೆಚ್ಚದಲ್ಲಿ ಅರ್ಧದಷ್ಟು, ಅಂದರೆ 40 ಮಿಲಿಯನ್ ಡಾಲರ್ ಮೊತ್ತವನ್ನು ಎಕ್ಸ್-ಪ್ರೆಸ್ ಫೀಡರ್ಸ್ ಭರಿಸಬೇಕು ಎಂದು ಶ್ರೀಲಂಕಾ ಸರಕಾರ ಪ್ರತಿಪಾದಿಸಿದೆ.
ಮುಳುಗಿದ ಹಡಗಿನಿಂದ ಹೊರಬಿದ್ದು ಪರಿಸರ ವ್ಯವಸ್ಥೆಗೆ ಸೇರ್ಪಡೆಯಾಗುವ ಅಪಾಯಕಾರಿ ವಸ್ತುಗಳು ಭೂಮಿಗೆ ಭಾರೀ ಹಾನಿ ಎಸಗಲಿದೆ. ಇದರಿಂದ ಕೊಲಂಬೋ ಕರಾವಳಿ ಪ್ರದೇಶದ ಜನರ ಜೀವಕ್ಕೆ ಅಪಾಯವಿದೆ ಎಂದು ಶ್ರೀಲಂಕಾದಲ್ಲಿನ ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ಹನಾ ಸಿಂಗರ್-ಹಮ್ದಿ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತ ಸೇರಿ ಅಂತರಾಷ್ಟ್ರೀಯ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಿದ ದುಬೈ








