‘ಅಗಸ್ತ್ಯ’ನಿಗೆ ಬರ್ತ್ ಡೇ ಸಂಭ್ರಮ: ‘ಮದಗಜ’ನ ಬಗ್ಗೆ ಪ್ರಶಾಂತ್ ನೀಲ್ ಮಾತು..!
ಇಂದು ರೋರಿಂಗ್ ಸ್ಟಾರ್ ಶ್ರೀಮುರುಳಿ ಬರ್ತ್ ಡೇ ಪ್ರಯುಕ್ತ ಅವರ ಮುಂಬರುವ ಸಿನಿಮಾ ಮದಗಜದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ಇದೀಗ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದು, ಮುರುಳಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದ್ಹಾಗೆ ಚಿತ್ರದ ಟೀಸರ್ ಅನ್ನ ನಿರ್ದೇಶಕ ಪ್ರಶಾಂತ್ ನೀಲ್ ಹಾಡಿ ಹೊಗಳಿದ್ದಾರೆ.
ಮದಗಜ ಟೀಸರ್.. ಅದ್ಭುತಃ.. ಅದ್ಭುತಸ್ಯ.. ಅದ್ಭುತೋಭ್ಯಃ..!!
‘ಸಿನಿಮಾ ಇಂಡಸ್ಟ್ರಿಯಲ್ಲಿ ಟೆಕ್ನೀಶಿಯನ್ ಆಗಿ 10 ವರ್ಷ ಕೆಲಸಮಾಡಿದ್ರೂ, 35 ವರ್ಷಗಳ ಕಾಲ ಪ್ರೇಕ್ಷಕನಾಗಿ ಅನುಭವವಿದೆ. ಹಾಗಾಗಿ ಮದಗಜ ಟೀಸರ್ ನ ಬಗ್ಗೆ ಪ್ರೇಕ್ಷಕನಾಗಿಯೇ ಹೇಳೋಕೆ ಇಷ್ಟ ಪಡ್ತೇನೆ. ಒಂದು ಪದದಲ್ಲಿ ಹೇಳಬೇಕಂದ್ರ ಸಿನಿಮಾ ಆಸಮ್ ‘ ಎಂದು ಮದಗಜ ಟೀಸರ್ ಬಗೆಗಿನ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೇ ಇಡೀ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಇನ್ನೂ ಟೀಸರ್ ನಲ್ಲಿ ಶ್ರೀಮುರುಳಿ ಲುಕ್ ನ ಹಾಡಿ ಹೊಗಳಿರುವ ಪ್ರಶಾಂತ್ ನೀಲ್ ಅವರು ಮುರುಳಿ ರೋರಿಂಗ್ ಆಗಿ ಕಾಣುಸ್ತಿದ್ದೀರಾ. ಸದಾ ಕಾಲ ಹೀಗೆ ಘರ್ಜಿಸುತ್ತಾಯಿರಿ, ಹ್ಯಾಪಿ ಬರ್ತ್ ಡೇ ಎಂದು ವಿಶ್ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel