Bellary : ಬಳ್ಳಾರಿಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿಗೆ ಹಣದ ಕೊರತೆಯಿದೆ – ಶ್ರೀರಾಮುಲು
ಬಳ್ಳಾರಿ : ಬಳ್ಳಾರಿಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿಗೆ ಹಣದ ಕೊರತೆಯಿದೆ.
ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಾಮಗಾರಿಗೆ ಇನ್ನೂ 5೦ ಕೋಟಿ ಅನುದಾನ ಬೇಕಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ, ಹೃದಯ ವಿಭಾಗ ಉದ್ಘಾಟನೆ ಸಮಾರಂಭದಲ್ಲಿ ಬಾಗಿಯಾಗಿ ಮಾತನಾಡಿದ್ದಾರೆ..
ಕಾಮಗಾರಿ ಮುಗಿಸಲು ಬೇಕಾದ ಅನುದಾನವನ್ನ ಮುಖ್ಯಮಂತ್ರಿಗಳ ಬಳಿಯಿಂದ ಬಿಡುಗಡೆ ಮಾಡಿಸಿ ತರುವೆ.
ಇನ್ನೂ 2 -3 ತಿಂಗಳಲ್ಲಿ ಸೂಪರ್ ಸ್ಪೇಷಾಲಿಟಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳುವೆ ಎಂದಿದ್ಧಾರೆ.