Kabza | ಉಪ್ಪಿ ಜೊತೆ ಶ್ರೀಯಾ ಶರಣ್ ಡುಯೆಟ್..!
ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಕಬ್ಜ ಸಿನಿಮಾದ ಬಗ್ಗೆ ಮೇಜರ್ ಅಪ್ ಡೇಟ್ ಬಂದಿದೆ.
ಪ್ಯಾನ್ ಇಂಡಿಯಾ ಸಿನಿಮಾವಾಗಿ ಸೆಟ್ಟೇರುತ್ತಿರುವ ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ.
ಸಿನಿಮಾದ ಚಿತ್ರೀಕರಣವೂ ಕೂಡ ಭರದಿಂದ ಸಾಗುತ್ತಿದೆ. ಈ ನಡುವೆ ನಿರ್ದೇಶಕ ಆರ್.ಚಂದ್ರು, ಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರೂ ದಕ್ಷಿಣದ ಖ್ಯಾತ ತಾರೆಯರೇ ಇರಲಿದ್ದಾರೆ ಎಂದು ಹೇಳಿದ್ದರು.
ಆ ಮಾತಿನಂತೆ ಇದೀಗ ಶ್ರೀಯಾ ಶರಣ್ ಅವರನ್ನು ಕರೆತಂದಿದ್ದಾರೆ. ಕಬ್ಜ ಚಿತ್ರದಲ್ಲಿ ನಟಿ ಶ್ರೀಯಾ, ಉಪೇಂದ್ರ ಅವರಿಗೆ ಜೋಡಿಯಾಗಲಿದ್ದಾರಂತೆ.
ಇನ್ನು ಕಿಚ್ಚ ಸುದೀಪ್ ಅವರಿಗೂ ಈ ಸಿನಿಮಾದಲ್ಲಿ ನಾಯಕಿ ಇರಲಿದ್ದು, ಸದ್ಯದಲ್ಲಿಯೇ ನಟಿಯ ಹೆಸರನ್ನೂ ಬಹಿರಂಗ ಪಡಿಸುತ್ತೇನೆ ಎಂದು ನಿರ್ದೇಶಕ ಆರ್.ಚಂದ್ರು ತಿಳಿಸಿದ್ದಾರೆ.
ಇನ್ನು ಕಬ್ಜ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ.
shriya-saran-is-heroine-of-upendra-kabza-movie