ನಿರ್ಮಾಪಕ ರಾಮು ನಿಧನ : ಮಾಲಾಶ್ರೀಗೆ ಭಾವುಕ ಪತ್ರ ಬರೆದ ಶ್ರುತಿ..!
ಬೆಂಗಳೂರು: ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ ಹಾಗೂ ಖ್ಯಾತ ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದು, ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಇದೀಗ ಖ್ಯಾತ ನಟಿ ಶ್ರುತಿ ಅವರು ಮಾಲಾಶ್ರೀ ಅವರಿಗೆ ಭಾವುಕ ಪತ್ರ ಬರೆದು ತಮ್ಮ ಗೆಳತಿಗೆ ಧೈರ್ಯ ತುಂಬಿದ್ದಾರೆ.
ತಾವು ಬರೆದಿರುವ ಪತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿರುವ ಶ್ರುತಿ ಅವರು, ಇಂತಹ ಸಂಕಷ್ಟದ ಸಮಯದಲ್ಲಿ ನಿನ್ನ ಕಣ್ಣೀರು ಒರೆಸಲು ನಾನು ಪಕ್ಕದಲ್ಲಿರುವುದಕ್ಕೆ ಸಾಧ್ಯವಾಗದ ಈ ಪರಿಸ್ಥಿತಿಗೆ ನನ್ನ ಧಿಕ್ಕಾರವಿರಲಿ ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಇನ್ನೂ ಇದೇ ಎಲ್ಲರಲ್ಲೂ ಒಂದು ಕಳಕಳಿಯ ಮನವಿ, ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ. ಹಾಗೂ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಮೆಂಟ್ ಮಾಡುವುದರ ಬದಲು ಒಂದು ಒಳ್ಳೆಯ ಕಮಿಟ್ಮೆಂಟ್ ಇರಲಿ ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.