SIDBI Recruitment 2025 : ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕಿನಲ್ಲಿ ಅಗತ್ಯವಿರುವ ಆಫೀಸರ್ಸ್ ಗ್ರೇಡ್ ‘ಎ’ ಮತ್ತು ಗ್ರೇಡ್ ‘ಬಿ’ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ
ಆಫೀಸರ್ಸ್ ಗ್ರೇಡ್ ‘ಎ’ ಮತ್ತು ಗ್ರೇಡ್ ‘ಬಿ’
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 76 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಹುದ್ದೆ ಹುದ್ದೆಗಳ ಸಂಖ್ಯೆ
ಅಸಿಸ್ಟಂಟ್ ಮ್ಯಾನೇಜರ್ ಗ್ರೇಡ್ ‘ಎ’ 50
ಮ್ಯಾನೇಜರ್ ಗ್ರೇಡ್ ‘ಬಿ’ 11
ಮ್ಯಾನೇಜರ್ ಗ್ರೇಡ್ ‘ಬಿ’ (ಲೀಗಲ್) 8
ಮ್ಯಾನೇಜರ್ ಗ್ರೇಡ್ ‘ಬಿ’ (ಐಟಿ) 7
ಶೈಕ್ಷಣಿಕ ಅರ್ಹತೆ :
• ಅಸಿಸ್ಟಂಟ್ ಮ್ಯಾನೇಜರ್ ಗ್ರೇಡ್ ‘ಎ’ – ಕನಿಷ್ಠ ಶೇಕಡಾ 60% (ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಶೇಕಡಾ 50%) ಅಂಕಗಳೊಂದಿಗೆ ಕಾಮರ್ಸ್/ ಎಕಾನಾಮಿಕ್ಸ್/ ಮ್ಯಾಥೆಮ್ಯಾಟಿಕ್ಸ್/ ಸ್ಟಾಟಿಸ್ಟಿಕ್ಸ್/ಬಿಸಿನೆಸ್ ಅಡ್ಮಿನಿಸ್ಟ್ರೇಷನ್/ ಇಂಜಿನಿಯರಿಂಗ್ ಪದವಿ ಅರ್ಹತೆ ಹೊಂದಿರಬೇಕು ಅಥವಾ CS/ CMA/ ICWA/ CFA/ CA/ MBA/ PGDM ಪದವಿ ಅರ್ಹತೆ ಹೊಂದಿರಬೇಕು.
• ಮ್ಯಾನೇಜರ್ ಗ್ರೇಡ್ ‘ಬಿ’ – ಕನಿಷ್ಠ ಶೇಕಡಾ 60% (ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಶೇಕಡಾ 50%) ಅಂಕಗಳೊಂದಿಗೆ ಯಾವುದೇ ಪದವಿ ಅರ್ಹತೆ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
• ಮ್ಯಾನೇಜರ್ ಗ್ರೇಡ್ ‘ಬಿ’ (ಲೀಗಲ್) – ಕನಿಷ್ಠ ಶೇಕಡಾ 50% (ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಶೇಕಡಾ 45%) ಅಂಕಗಳೊಂದಿಗೆ ಕಾನೂನು ಪದವಿ ಹೊಂದಿರಬೇಕು.
• ಮ್ಯಾನೇಜರ್ ಗ್ರೇಡ್ ‘ಬಿ’ (ಐಟಿ) – ಕನಿಷ್ಠ ಶೇಕಡಾ 60% (ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಶೇಕಡಾ 55%) ಅಂಕಗಳೊಂದಿಗೆ ಇಂಜಿನಿಯರಿಂಗ್/ ಟೆಕ್ನಾಲಜಿ ಇನ್ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಟೆಕ್ನಾಲಜಿ/ ಇನ್ಫಾರ್ಮೆಷನ್ ಟೆಕ್ನಾಲಜಿ/ ಇಲೆಕ್ಟ್ರಾನಿಕ್ಸ್/ ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ಸ್ ಅರ್ಹತೆ ಅಥವಾ ಎಂಸಿಎ ಪದವಿ ಹೊಂದಿರಬೇಕು.
ವಯೋಮಾನ :
ದಿನಾಂಕ 14/07/2025ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಾನ ಹೊಂದಿರಬೇಕು.
• ಅಸಿಸ್ಟಂಟ್ ಮ್ಯಾನೇಜರ್ ಗ್ರೇಡ್ ‘ಎ’ – ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ
• ಮ್ಯಾನೇಜರ್ ಗ್ರೇಡ್ ‘ಬಿ’ – ಕನಿಷ್ಠ 25 ವರ್ಷ, ಗರಿಷ್ಠ 33 ವರ್ಷ
ವಯೋಮಿತಿ ಸಡಿಲಿಕೆ :
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
• ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷ
ವೇತನ :
ಹುದ್ದೆ ವೇತನ
ಅಸಿಸ್ಟಂಟ್ ಮ್ಯಾನೇಜರ್ ಗ್ರೇಡ್ ‘ಎ’ 44500 – 89150
ಮ್ಯಾನೇಜರ್ ಗ್ರೇಡ್ ‘ಬಿ’ 55200 – 99750
ಆಯ್ಕೆ ವಿಧಾನ :
ಫೇಸ್-1, ಫೇಸ್-2 ಆನ್ಲೈನ್ ಪರೀಕ್ಷೆ ಹಾಗೂ ಫೇಸ್-3 (ಸಂದರ್ಶನ) ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಉದ್ಯೋಗ ಮಾಹಿತಿ : ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿ ಶುಲ್ಕ :
• ಪ.ಜಾತಿ/ ಪ.ಪಂ./ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು – ರೂ. 175
• ಉಳಿದ ಅಭ್ಯರ್ಥಿಗಳು – ರೂ. 1,100
ಶುಲ್ಕ ಪಾವತಿಸುವ ವಿಧಾನ :
ನಿಗದಿಪಡಿಸಿದ ಶುಲ್ಕವನ್ನು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 14, 2025
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 11, 2025
• (ತಾತ್ಕಾಲಿಕ) ಫೇಸ್-1 ಆನ್ಲೈನ್ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ 06, 2025
• (ತಾತ್ಕಾಲಿಕ) ಫೇಸ್-2 ಆನ್ಲೈನ್ ಪರೀಕ್ಷೆ ದಿನಾಂಕ : ಅಕ್ಟೋಬರ್ 04, 2025
• (ತಾತ್ಕಾಲಿಕ) ಸಂದರ್ಶನ ದಿನಾಂಕ : ನವೆಂಬರ್, 2025
Website:https://www.sidbi.in/en/careers/careerdetails/recruitment_of_officers_in_grade_a_and_grade_b_general_and_specialist_stream_14_07_2025








