ನೋವಿನ ಸಂಗತಿ ಹಂಚಿಕೊಂಡ ಸಿದ್ದಗಂಗಾ ಶ್ರೀಗಳು
ತುಮಕೂರು : ಹಸುವನ್ನ ಚೆನ್ನಾಗಿರುವವರೆಗೂ ದುಡಿಸಿಕೊಂಡು ಅದರಿಂದ ಪ್ರಯೋಜನ ಪಡೆದುಕೊಂಡು ಅದರ ಕೊನೆಗಾಲದಲ್ಲಿ ನಿಶ್ಯಕ್ತಿ ಆದಾಗ ಯಾವ್ಯಾವುದೂ ರೀತಿಯಲ್ಲಿ ವಿಲೇವಾರಿ ಮಾಡೋದು ತುಂಬಾ ನೋವಿನ ಸಂಗತಿ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಾ ಶ್ರೀಗಳು ಹೇಳಿದ್ದಾರೆ.
ಗೋ ಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಹಿನ್ನೆಲೆ ತುಮಕೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬಹಳ ದಿನಗಳಿಂದ ಇದರ ಬೇಡಿಕೆ ಇತ್ತು.
ಈಗಾಗಲೇ ಅನೇಕ ರಾಜ್ಯಗಳು ಗೋ ಹತ್ಯೆ ನಿಷೇಧ ಮಾಡಿವೆ. ಅದನ್ನೆಲ್ಲಾ ಪರಿಶೀಲಿಸಿ ನಮ್ಮ ಕರ್ನಾಟಕದಲ್ಲೂ ಕೂಡ ದೊಡ್ಡ ಅಭಿಲಾಷೆ ಇಟ್ಟುಕೊಂಡು ಗೋಹತ್ಯೆ ನಿಷೇಧವನ್ನು ಜಾರಿ ಮಾಡಿದ್ದಾರೆ.
ಗೋ ಹತ್ಯೆಯನ್ನು ಸರ್ಕಾರ ನಿಷೇಧ ಮಾಡಿದೆ ಅನ್ನೊದಕ್ಕಿಂತ ಪ್ರತಿಯೊಬ್ಬ ರೈತನೂ ಜಾಗೃತರಾಗಬೇಕು ಎಂದು ಮನವಿ ಮಾಡಿಕೊಂಡರು.
ಸಗಣಿ ಎತ್ತಿದ್ದರಿಂದ ಏನೂ ಆಗೋದಿಲ್ಲ, ಆರಾಧನೆ ಮಾಡಬೇಕು
ಇನ್ನು ಗೋವನ್ನ ನಮ್ಮ ಮನೆಯ ಸದಸ್ಯ ಅಂತ ಭಾವಿಸಿ ಸಂರಕ್ಷಿಸಬೇಕು. ಒಂದು ದುಃಖಕರ ಸಂಗತಿ ಅಂದ್ರೆ ಹಸುವನ್ನ ಚೆನ್ನಾಗಿರುವವರೆಗೂ ದುಡಿಸಿಕೊಂಡು ಅದರಿಂದ ಪ್ರಯೋಜನ ಪಡೆದುಕೊಂಡು ಅದು ಕೊನೆಗಾಲದಲ್ಲಿ ನಿಶ್ಯಕ್ತಿ ಆದಾಗ ಯಾವ್ಯಾವುದೂ ರೀತಿಯಲ್ಲಿ ವಿಲೇವಾರಿ ಮಾಡೋದು ತುಂಬಾ ನೋವಿನ ಸಂಗತಿ.
ಈ ಸಂಸ್ಕøತಿ ಹೋಗಬೇಕು ಎಂದು ಶ್ರೀಗಳು ತಿಳಿಸಿದರು. ಹಿಂದಿನಿಂದಲೂ ಗೋವುಗಳು ನಮ್ಮ ಸಂಪತ್ತು ಎಂದು ಭಾವಿಸಿಕೊಂಡು ಬಂದಿದ್ದೀವಿ. ಅಷ್ಟೇ ಅಲ್ಲ ಗೋವಿನಿಂದ ಉತ್ಪತ್ತಿಯಾಗೋ ಪಂಚಗವ್ಯಗಳು ಕೂಡ ಪವಿತ್ರವಾದದ್ದು ಎಂದು ಶ್ರೀಗಳು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel