Siddaramaiah – ಬಿಜೆಪಿ ಅವರು ಹಿಂಬಾಗಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ, ನಾವು ಮುಂಬಾಗಲಿಂದ ಓಡಿಸೋಣ
ಮಂಡ್ಯ : ನಾನು ಯಾರಿಂದಲೂ ಛೀ.. ಥೂ ಎನಿಸಿಕೊಂಡು ಅಧಿಕಾರ ಮಾಡಿಲ್ಲ. ಬಿಜೆಪಿ ಅವರು ಅಧಿಕಾರಕ್ಕೆ ಬಂದಿರೋದು ಹಿಂಬಾಗಲಿನಿಂದ, ನಾವು ಮುಂಬಾಗಲಿಂದಲೇ ಓಡಿಸೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಜನರ ಆಶೀರ್ವಾದದಿಂದ ಐದು ವರ್ಷ ಸಿಎಂ ಆಗಿದ್ದೆ.

ಯಾರಿಂದಲೂ ಛೀ, ಥೂ ಅನಿಸಿಕೊಂಡು ಅಧಿಕಾರಿ ಮಾಡಲಿಲ್ಲ. ನಾವು ನುಡಿದಂತೆ ನಡೆಸಿದ್ದೇವೆ.
ನಾವು ನೀಡಿದ್ದ 158 ಭರವಸೆಗಳನ್ನೂ ಈಡೇರಿಸಿದ್ದೇವೆ, ಜೊತೆಗೆ ಅದನ್ನು ಮೀರಿ 30ಕ್ಕೂ ಹೆಚ್ಚು ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಪಿ ಅವರು ಹಿಂಬಾಗಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ, ನಾವು ಮುಂಬಾಗಲಿಂದಲೇ ಓಡಿಸೋಣ ಎಂದ ಸಿದ್ದರಾಯಮಯ್ಯ, ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕಾ ಎಂದು ಪ್ರಶ್ನಿಸಿದ್ದಾರೆ.








