ಸರ್ಕಾರ ಮೊದಲು ಬಿಪಿಎಲ್ ಕಾರ್ಡ್ ದಾರರಿಗೆ ಹಣ ಕೊಡ್ಲಿ : ಸಿದ್ದರಾಮಯ್ಯ
ಬೆಂಗಳೂರು : ಕೊರೊನಾ ಸಂಕಷ್ಟದಲ್ಲಿ ರಾಜ್ಯ ಸರ್ಕಾರ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡ್ಲಿ. ವಿಶೇಷ ಕಾರ್ಯದರ್ಶಿ ಹುದ್ದೆಯನ್ನು ತೆಗೆದು ಹಾಕಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ಈಗ ಅನಗತ್ಯ ಹುದ್ದೆಗಳಿಗೆ ಕಡಿವಾಣ ಹಾಕಬೇಕು.
ಅಭಿವೃದ್ಧಿ ಕೆಲಸ ನಿಲ್ಲಿಸಿ, ಅಕ್ಕಿ ಕೊಡಲು 20-30 ಕೋಟಿ ಮೀಸಲಿಡಬೇಕು. ಮೊದಲು ಬಿಪಿಎಲ್ ಕಾರ್ಡ್ ದಾರರಿಗೆ ಹಣ ಕೊಡ್ಲಿ. ಜೇಬಿನಲ್ಲಿ ದುಡ್ಡು ಇದ್ರೆ ಮಾತ್ರ ಮಾರುಕಟ್ಟೆಗೆ ಹೋಗಿ ಹಣ್ಣು ತರಕಾರಿ ತರಬಹುದು.
ಹೀಗಾಗಿ ಮೊದಲು ಅವರ ಜೀಬಿಗೆ ದುಡ್ಡು ಹಾಕ್ಲಿ. ನಾನು ಐದು ವರ್ಷ ಸಿಎಂ ಆಗಿದ್ದಾಗ ಒಬ್ಬನೇ ಒಬ್ಬ ಪೊಲಿಟಿಕಲ್ ಸೆಕ್ರೆಟರಿ ಇರಲಿಲ್ಲ. ಆದ್ರೆ ಈಗ ಅನಗತ್ಯ ಹುದ್ದೆ ಸೃಷ್ಟಿ ಮಾಡಿಕೊಂಡಿದ್ದಾರೆ.
ಅದನ್ನ ಎಲ್ಲಾ ಕಟ್ ಆಫ್ ಮಾಡಲಿ ಎಂದು ಸಲಹೆ ನೀಡಿದರು.
ಇನ್ನು ಲಾಕ್ ಡೌನ್ ಬಗ್ಗೆ ಮಾತನಾಡಿ, ಲಾಕ್ ಡೌನ್ ಗೆ ನನ್ನ ವಿರೋಧ ಇಲ್ಲ. ತಜ್ಞರ ಸಲಹೆ ಮೇಲೆ ಮಾಡಿದ್ದಾರೆ. ಆದರೆ ಮಾಡಿದ ಮೇಲೆ ಕೂಲಿ ಕಾರ್ಮಿಕರಿಗೆ ಫೈನಾನ್ಶಿಯಲ್ ಪ್ಯಾಕೇಜ್ ಅನೌನ್ಸ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.










