ಇದ್ಯಾವ ವರಸೆ ಹುಲಿಯಾ.. ನಿಮ್ಮ ಮುಂದೆ ಸಮಸ್ಯೆನೂ ಹೇಳ್ಕೋಬಾರ್ದಾ..?
ಬಾಗಲಕೋಟೆ : ಸಿದ್ದರಾಮಯ್ಯನವರೇ ನಿಮ್ಮನ್ನ ಹುಲಿಯಾ ಎಂದು ತಲೆ ಮೇಲೆ ಕೂರಿಸಿಕೊಂಡಿದ್ದಕ್ಕೆ ಇದೇನಾ ನೀವು ಕೊಡೋ ಬೆಲೆ…? ನಿಮ್ಮ ಮುಂದೆ ಸಮಸ್ಯೆನೂ ಹೇಳಿಕೊಳ್ಬಾರ್ದಾ ಸರ್..!? ಇವು ಸದ್ಯ ಬಾದಾಮಿ ಜನರ ಮಾತುಗಳು.
ಇದಕ್ಕೆ ಕಾರಣ ಬಾದಾಮಿಯಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ನಡೆದ ಘಟನೆ.
ಏನು ಆ ಘಟನೆ..?
ಬಾದಾಮಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕೊರೊನಾ ಲಸಿಕೆ ಹೇಗೆ,ಯಾರಿಗೆ,ಎಲ್ಲಿ ವಿತರಣೆ ಆಗುತ್ತೆ : ಸಂಪೂರ್ಣ ಮಾಹಿತಿ ಇಲ್ಲಿದೆ
ಈ ಸಭೆಯಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯನವರೂ ಕೂಡ ಉಪಸ್ಥಿತರಿದ್ದರು. ಸನ್ಮಾನದ ಬಳಿಕ ಕೆಲ ಗ್ರಾಮಪಂಚಾಯಿತಿ ಸದಸ್ಯರು ಭಾಷಣೆ ಮಾಡುತ್ತಿದ್ದರು.
ಈ ವೇಳೆ ಕಿತ್ತಲಿ ಗ್ರಾಮದ ಗ್ರಾಮ ಪಂಚಾತಿಯಿ ಸದಸ್ಯ ಸಂಗಣ್ಣ ಜಾಬಣ್ಣವರ್ ತಮ್ಮ ಗ್ರಾಮದ ಸಮಸ್ಯೆ ಹೇಳಿಕೊಂಡರು.

ಜನರಿಂದ ಗೆದ್ದ ಯಾರೂ ಕೂಡ ನಮ್ಮ ಹಳ್ಳಿ ಕಡೆಗೆ ಬಂದಿಲ್ಲ. ನಮ್ಮ ಗ್ರಾಮದ ಆಶ್ರಯ ಮನೆಗಳು ಹಾಳಾಗಿವೆ. ಸಿದ್ದರಾಮಯ್ಯನವರು ಬಂದು ಪಿಡಿಒಗಳಿಗೆ ಎಚ್ಚರಿಕೆ ನೀಡಿದ್ರೂ ಏನು ಬದಲಾವಣೆ ಆಗಿಲ್ಲ.
ನಾಯಕರು ನಮ್ಮ ಕಡೆ ಬಂದು ಜನ್ರ ಸಮಸ್ಯೆ ಆಲಿಸಬೇಕೆಂದು ಹೇಳಿದ್ರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಸದಸ್ಯನ ಬಳಿ ಬಂದು ಬಲವಂತವಾಗಿ ವೇದಿಕೆಯಿಂದ ಕೆಳಗೆ ಇಳಿಸಿದರು.
ಇದರಿಂದ ಸಭೆಯಲ್ಲಿ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








