ಬೆಂಗಳೂರು : ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ( Siddaramaiah ) ಅವರು ನಾಳೆಯಿಂದ ಪ್ರವಾಹ ಪೀಡಿತ ಬಾದಾಮಿ ಕ್ಷೇತ್ರದಲ್ಲಿ ಎರಡು ದಿನ ಪ್ರವಾಸ ಕೈಗೊಳ್ಳಲಿದ್ದಾರೆ.
ಸಿದ್ದರಾಮಯ್ಯ ( Siddaramaiah ) ನಾಳೆ ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಬೆಳಗಾವಿ ವಿಮಾನನಿಲ್ದಾಣ ತೆರಳಲಿದ್ದು, 12.30 ಕ್ಕೆ ಸ್ವಕ್ಷೇತ್ರ ಬಾದಾಮಿ ತಲುಪಲಿದ್ದಾರೆ.
ನಾಳೆ ಬಾದಾಮಿಯಲ್ಲಿ ಕೆಡಿಪಿ ಸಭೆ ನಡೆಸಲಿರುವ ಸಿದ್ದರಾಮಯ್ಯ, ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ :ಕರ್ನಾಟಕ ಉಪಚುನಾವಣೆ – 37 ಅಭ್ಯರ್ಥಿಗಳ ನಾಮನಿರ್ದೇಶನ
ಮಾರನೇ ದಿನ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಕೆಂದೂರು, ಕಾತರಕಿ, ಬೇಲೂರು, ಜಾಲಿಹಾಳ,ಕೆರೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಮುಂದಿನ 3 ವಾರಗಳಲ್ಲಿ ಕೋವಿಡ್ ಪ್ರಕರಣಗಳು 10 ಲಕ್ಷ ತಲುಪುವ ಸಾಧ್ಯತೆ
ಬಳಿಕ ಅಕ್ಟೋಬರ್ 21 ರಂದು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel