ಬೆಂಗಳೂರು : ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ. ಒಂದೂ ರೂಪಾಯಿ ಸಹಾ ಅಭಿವೃದ್ಧಿಗೆ ನೀಡುತ್ತಿಲ್ಲ.
ಜನ ಸರ್ಕಾರಕ್ಕೆ ಎಚ್ಚರಿಕೆಯ ಘಂಟೆ ಹೊಡಿಬೇಕು. ಹಾಗೆ ಘಂಟೆ ಹೊಡಿಬೇಕಾದರೆ ಜನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ಶಾಸಕರನ್ನ 20-25 ಕೋಟಿ ಕೊಟ್ಟು ಖರೀದಿ ಮಾಡಿ ಸರ್ಕಾರ ರಚನೆ ಮಾಡಿದರು.
ಇದು 10% ಕಮಿಷನ್ ಸರ್ಕಾರ. ನಾನು ಹೆಸರು ಹೇಳಲ್ಲ ಇದೇ ಸರ್ಕಾರದ ಒಬ್ಬ ಸಚಿವ ಹೇಳುತ್ತಾನೆ.
ಸರ್ ಗುತ್ತಿಗೆ ಕಾಮಗಾರಿ ಸ್ಯಾಂಕ್ಷನ್ ಆಗಬೇಕು ಅಂದ್ರೆ 10% ಕಮಿಷನ್ ಕೊಡಲೇಬೇಕು.
ನಮ್ಮ ಕ್ಷೇತ್ರದ ಗುತ್ತಿಗೆದಾರ ಒಬ್ಬ 10 ಲಕ್ಷ ಕೊಟ್ಟು ಕೆಲಸ ಮಾಡಿಕೊಂಡು ಬಂದಿದ್ದಾನೆ ಎಂದು ಸಚಿವನೇ ಹೇಳುತ್ತಾನೆ.
ಸಚಿವನಿಗೆ ಹೀಗಾದ್ರೆ ಶಾಸಕರ ಪರಿಸ್ಥಿತಿ ಏನು? ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ.
ಕಳೆದ ಒಂದು ವರ್ಷದಲ್ಲಿ ವಿಪರೀತ ಸಾಲ ಮಾಡಿದ್ದಾರೆ. ಹೀಗಾಗಿ ರಾಜ್ಯ ಮತ್ತು ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ : ನನ್ನ ಪ್ರಕಾರ ಜೆಡಿಎಸ್ ಒಂದು ಪಕ್ಷವೇ ಅಲ್ಲ : ಸಿದ್ದರಾಮಯ್ಯ
ಇನ್ನು ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಒಂದೂವರೆ ವರ್ಷದಿಂದ ಶಾಸಕನಿಲ್ಲ. ಸಮ್ಮಿಶ್ರ ಸರ್ಕಾರ ಬೀಳಿಸಲು ಮುನಿರತ್ನ ಸಹ ಕಾರಣ.
ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೇರ್ಪಡೆಯಾಗಲೂ ಮುಖಂಡರು ಉತ್ಸಾಹ ತೋರುತ್ತಿದ್ದಾರೆ.
ಇದು ಒಳ್ಳೆಯ ಬೆಳವಣಿಗೆ. ಜೆಡಿಎಸ್ ನವರು ಯಾವತ್ತು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಲ್ಲ.
ಅವರು ಬೇರೆಯವರ ಹೆಗಲ ಮೇಲೆ ಕುಳಿತು ಆಡಳಿತ ನಡೆಸುವವರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.








