ಗೌಪ್ಯ ಸಭೆಯಲ್ಲಿ ಬಿಜೆಪಿಗರನ್ನ ಸೀಳು ನಾಯಿಗೆ ಹೋಲಿಸಿ ಮಾತನಾಡಿದ ಸಿದ್ದರಾಮಯ್ಯ
ನಾನು ಒಬ್ಬ ಮಾತನಾಡಿದ್ರೆ ಬಿಜೆಪಿಯ 25 ಮಂದಿ ಮುಧೋಳ ನಾಯಿಗಳಂತೆ ನನ್ನ ವಿರುದ್ಧ ಬೊಗಳುತ್ತಾರೆ. ಆದರೆ ಅವರು ಬೊಗಳಿದರೆ ನಾನೇ ಮಾತನಾಡಬೇಕು, ನಮ್ಮ ಪಕ್ಷದ ಬೇರೆ ಯಾರೂ ಮಾತನಾಡುವುದಿಲ್ಲ ಎಂದು ಬಿಜೆಪಿ ನಾಯಕರನ್ನ ನಾಯಿಗೆ ಹೋಲಿಸಿ ಮಾತನಾಡಿದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ವೀಡಿಯೋ ವೈರಲ್ ಆಗಿದೆ.
ಮೈಸೂರು ನಗರದ ಟಿಕೆ ಬಡಾವಣೆಯ ನಿವಾಸದ ಗೌಪ್ಯ ಸಭೆಯಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬಹಿರಂಗವಾಗಿದೆ. ನಾನು ಒಬ್ಬ ಮಾತಾಡಿದ್ರೆ ಬಿಜೆಪಿಯ 25 ಜನ ಮಾತಾಡ್ತಾರೆ ಮುಧೋಳ್ ನಾಯಿಗಳ ರೀತಿ ಅಂತ ಸಿದ್ದು ಆಪ್ತರು ಅಂದ್ರೆ ಇಲ್ಲ ಸೀಳು ನಾಯಿಗಳ ರೀತಿ ಎಂದು ಸಿದ್ದು ಹೇಳುತ್ತಾರೆ.
ಸ್ವ ಪಕ್ಷದ ನಾಯಕರ ವಿರುದ್ಧವೂ ಸಿದ್ದರಾಮಯ್ಯ ಅಸಮಧಾನಗೊಂಡಿದ್ದಾರೆ ಎನ್ನುವುದನ್ನ ವೀಡಿಯೋದಲ್ಲಿ ಕಾಣಬಹುದು . ಅವರು ಮಾತನಾಡಿದರೆ ನಮ್ಮವರು ಒಬ್ಬರೂ ಮಾತನಾಡುವುದಿಲ್ಲ ಅದೇ ಬಂದಿರುವುದು ತಾಪತ್ರಯ ಎಂದಿದ್ದಾರೆ. ಆಪ್ತರ ಮುಂದೆ ತಾನು ಏಕಾಂಗಿ ಎಂಬುದನ್ನ ಸಿದ್ದರಾಮಯ್ಯ ತೋಡಿಕೊಂಡಿದ್ದಾರೆ.
ನನ್ನ ಕಾಲದ ಸಾಧನೆ ಬಗ್ಗೆ ಪುಸ್ತಕ ಮಾಡಿ ಕೊಟ್ಟಿದ್ದೇನೆ ಅದನ್ನ ಓದಿ ಮಾತನಾಡುವುದಕ್ಕೂ ಹೇಳಬೇಕ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.