ಇಂಡೋ-ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಸಿದ್ದರಾಮಯ್ಯ ಸಂತಾಪ
ಬೆಂಗಳೂರು : ಲಡಾಖ್ ಪ್ರದೇಶದ ಗುಲ್ವಾನ್ ಬಳಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಕಾಳಗದಲ್ಲಿ ಭಾರತದ ಯೋಧರು ಹುತಾತ್ಮರಾಗಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಗಡಿಯಲ್ಲಿ ಹುತಾತ್ಮರಾದ ದೇಶದ ಸೈನಿಕರಿಗೆ ಸಂತಾಪ ಸೂಚಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಲಡಾಖ್ ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ನನ್ನ ಪ್ರಾಮಾಣಿಕ ಗೌರವ ವಂದನೆ. ಅವರು ನಮ್ಮನ್ನು ರಕ್ಷಿಸಲು ಧೈರ್ಯದಿಂದ ಹೋರಾಡಿದ್ದಾರೆ. ಅಲ್ಲದೇ ಅವರ ತ್ಯಾಗಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ.ಇಡೀ ರಾಷ್ಟ್ರವು ಹುತಾತ್ಮರ ಕುಟುಂಬಗಳೊಂದಿಗೆ ಇರುತ್ತದೆ ಎಂದು ದೇಶದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿರುವ ಸೈನಿಕರ ಕೊಡುಗೆಯನ್ನು ಸ್ಮರಿಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿಂದ ಲಡಾಕ್ ನ ಭಾರತ-
ಚೀನಾ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಚೀನಾ ಸೈನಿಕರು ಅಕ್ರಮವಾಗಿ ಭಾರತದ ಗಡಿ ಪ್ರವೇಶ ಮಾಡಿದ್ದಲ್ಲದೆ, ಭಾರತೀಯ ಯೋಧರ ಮೇಲೆ ಕಿರಿಕ್ ಮಾಡುತ್ತಲೇ ಬಂದಿದ್ದರು. ಭಾರತ-ಚೀನಾ ನಡುವೆ ಮಾತುಕತೆಗಳು ನಡೆದಿರುವ ಬೆನ್ನಲ್ಲೇ ಚೀನಾ ಸೈನಿಕರು ಅಟ್ಟಹಾಸ ಮೆರೆದಿದ್ದಾರೆ.
ಸೋಮವಾರ ರಾತ್ರಿ ಚೀನಾ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಅಧಿಕಾರಿ ಸೇರಿ ಮೂವರು ಹುತಾತ್ಮರಾಗಿದ್ದಾರೆ.








