ಎಲ್ಲದರಲ್ಲೂ ರಾಜಕೀಯ ಮಾಡುವುದೇ ‘ಸಿದ್ದಹಸ್ತ’ ಸೂತ್ರ : ಬಿಜೆಪಿ ಕಿಡಿ
ಬೆಂಗಳೂರು : ಎಲ್ಲದರಲ್ಲೂ ರಾಜಕೀಯ ಮಾಡುವುದೇ ಸಿದ್ದಹಸ್ತ ಸೂತ್ರ ಎಂದು ಕಾಂಗ್ರೆಸ್, ಸಿದ್ದರಾಮಯ್ಯ Siddaramaiah ವಿರುದ್ಧ ಬಿಜೆಪಿ ಕಿಡಿಕಾರಿದೆ.
ಕೋಟಾದ ಕೊರಗ ಜನಾಂಗದ ಮದುವೆ ಕಾರ್ಯಕ್ರಮಕ್ಕೆ ನುಗ್ಗಿ ಅಮಾನುಷವಾಗಿ ಲಾಠಿ ಚಾರ್ಜ್ ನಡೆಸಿದ ಪೊಲೀಸರು ಈಗ ದೌರ್ಜನ್ಯಕ್ಕೆ ಒಳಪಟ್ಟ ಕೊರಗ ಸಮುದಾಯದ ಮೇಲೆಯೇ ಸರ್ಕಾರದ ಜಾಮೀನು ರಹಿತ ಸೆಕ್ಷನ್ಗಳ ಪ್ರಕರಣ ದಾಖಲಿಸಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರ ಭಾರೀ ದಲಿತ ಪರವಾದ ಕಾಳಜಿ ತೋರ್ಪಡಿಸುತ್ತಿದ್ದಾರೆ. ದಲಿತ ರಾಜಕಾರಣಿಗಳನ್ನು ತುಳಿದು ಮೇಲೆ ಬಂದಿರುವ ಇತಿಹಾಸವನ್ನು ಹೊಂದಿರುವ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ದಲಿತರ ಮೇಲೆ ಪ್ರೀತಿ ಉಕ್ಕಿ ಹರಿಯತ್ತಿದೆ. ದಲಿತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವಷ್ಟು ಪ್ರೀತಿ ಇದೆಯೇ ಸಿದ್ದರಾಮಯ್ಯ?
ಮಾನ್ಯ ಸಿದ್ದರಾಮಯ್ಯನವರೇ, ಈ ಪ್ರಕರಣ ನಡೆದಾಗ ನೀವೇನು ಗಾಢ ನಿದ್ದೆಯಲ್ಲಿದ್ದಿರಾ? ಪ್ರಕರಣ ನಡೆದ 24 ಗಂಟೆಯೊಳಗಾಗಿ ಕರ್ತವ್ಯಲೋಪ ಎಸಗಿದ ಪೊಲೀಸರನ್ನು ಅಮಾನತು ಮಾಡಲಾಗಿದೆ. ಹೇಳಿಕೊಟ್ಟ ಮಾತು, ಬರೆದು ಕೊಟ್ಟ ಟ್ವೀಟು ಎಷ್ಟು ದಿನ ಬಾಳಿಕೆ ಬರುತ್ತದೆ ಎಂದು ಕಿಡಿಕಾರಿದೆ.
ಈ ರೀತಿಯ ಹೇಳಿಕೆಗಳ ಮೂಲಕ ಒಂದು ಸಮುದಾಯದ ನೈತಿಕ ಶಕ್ತಿಯನ್ನು ಅಡಗಿಸುವುದು ಸಿದ್ದರಾಮಯ್ಯ ಅವರ ಉದ್ದೇಶವಾಗಿದೆ.
ಒಂದು ಘಟನೆಯನ್ನು ವ್ಯವಸ್ಥಿತ ಷಡ್ಯಂತ್ರ, ಇತ್ಯಾದಿ ಎಂದು ಬಿಂಬಿಸಿ ಬೇಳೆ ಬೇಯಿಸಿಕೊಳ್ಳುವುದು ಎಷ್ಟು ಸೂಕ್ತ?
ಎಲ್ಲದರಲ್ಲೂ ರಾಜಕೀಯ ಮಾಡುವುದೇ ಸಿದ್ದಹಸ್ತ ಸೂತ್ರ.#ದಲಿತವಿರೋಧಿಸಿದ್ದರಾಮಯ್ಯ
— BJP Karnataka (@BJP4Karnataka) December 31, 2021
ಕೊರಗ ಸಮುದಾಯ ಬಂಧುಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವರು, ಕೇಂದ್ರ ಸಚಿವರು ತಕ್ಷಣವೇ ಸ್ಪಂದಿಸಿದ್ದಾರೆ. ಪ್ರಕರಣ ನಡೆದು ಕೆಲವು ದಿನಗಳಾದರೂ ನೀವು ಈಗ ಮಾತನಾಡುತ್ತಿರುವುದೇಕೆ? ದಲಿತರ ವಿಚಾರದಲ್ಲೂ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಹುನ್ನಾರವೇ ಎಂದು ಟೀಕೆ ಮಾಡಿದೆ.
ಈ ರೀತಿಯ ಹೇಳಿಕೆಗಳ ಮೂಲಕ ಒಂದು ಸಮುದಾಯದ ನೈತಿಕ ಶಕ್ತಿಯನ್ನು ಅಡಗಿಸುವುದು ಸಿದ್ದರಾಮಯ್ಯ ಅವರ ಉದ್ದೇಶವಾಗಿದೆ. ಒಂದು ಘಟನೆಯನ್ನು ವ್ಯವಸ್ಥಿತ ಷಡ್ಯಂತ್ರ, ಇತ್ಯಾದಿ ಎಂದು ಬಿಂಬಿಸಿ ಬೇಳೆ ಬೇಯಿಸಿಕೊಳ್ಳುವುದು ಎಷ್ಟು ಸೂಕ್ತ? ಎಲ್ಲದರಲ್ಲೂ ರಾಜಕೀಯ ಮಾಡುವುದೇ ಸಿದ್ದಹಸ್ತ ಸೂತ್ರ ಎಂದು ಕಾಂಗ್ರೆಸ್, ಸಿದ್ದರಾಮಯ್ಯ ಆರೋಪಿಸಿದೆ.