“ಕಾಂಗ್ರೆಸ್ ಪಕ್ಷವನ್ನೇ ಕಿತ್ತೊಗೀರಿ” ಎಂದ ಸಿದ್ದರಾಮಯ್ಯ siddaramaiah saaksha tv
ತುಮಕೂರು : ರಾಜ್ಯ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷವನ್ನು ತೆಗೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ತುಮಕೂರಿನಲ್ಲಿ ನಡೆದ ಐದು ಜಿಲ್ಲೆಗಳ ಪಕ್ಷದ ಮುಖಂಡರ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಬಾಯಿ ತಪ್ಪಿ ಎರಡು ಬಾರಿ ಕಾಂಗ್ರೆಸ್ ಪಕ್ಷವನ್ನು ತೆಗೆಯಬೇಕು ಎಂದುಬಿಟ್ಟರು.
ಈ ವೇಳೆ ಸಿದ್ದರಾಮಯ್ಯ ಮಾತು ಕೇಳಿ ಅಲ್ಲಿದ್ದವರು ಕಕ್ಕಾಬಿಕ್ಕಿಯಾದ್ರು, ಕೊನೆಗೆ ಎಸ್.ಆರ್.ಪಾಟೀಲ್ ಅವರು ಕಾಂಗ್ರೆಸ್ ಅಲ್ಲ ಬಿಜೆಪಿ ತೆಗೆಯಬೇಕು ಎಂದು ಎಚ್ಚರಿಸಿದರು.
ಆಗ ಸಾವರಿಸಿಕೊಂಡ ಸಿದ್ದರಾಮಯ್ಯ, ಆಡಳಿತದಲ್ಲಿರುವ ಪಕ್ಷವನ್ನ ತೆಗೆಯಬೇಕು ಎಂದು ಹೇಳಿದರು.
ಬಳಿಕ ಭಾಷಣ ಮುಂದುವರಿಸಿ, ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರ ಇದೆ, ಕೋವಿಡ್ ಸಲಕರಣೆಗಳ ಖರೀದಿ, ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನನ್ನ 40 ವರ್ಷದ ಆಡಳಿತದಲ್ಲಿ ಇಷ್ಟು ಭ್ರಷ್ಟ ಸರ್ಕಾರವನ್ನು ನೋಡಿಲ್ಲ. ಅಭಿವೃದ್ಧಿ ಮಾಡಲು ಇವರ ಬಳಿ ದುಡ್ಡಿಲ್ಲ, ಸುಮ್ಮನೆ ಘೋಷಣೆ ಮಾಡುತ್ತಾರೆ ಎಂದು ಕಿಡಿಕಾರಿದರು.









