ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜನ್ಮ ದಿನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಭಾಶಯಗಳು ತಿಳಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ 87ನೇ ಹುಟ್ಟುಹಬ್ಬದ ಶುಭ ಕೋರಿದ ಅವರು ನಿಮ್ಮ ಅನುಭವ, ಜ್ಞಾನ ಮತ್ತು ಮಾರ್ಗದರ್ಶನ ಇನ್ನಷ್ಟು ಕಾಲ ರಾಜ್ಯಕ್ಕೆ, ದೇಶಕ್ಕೆ ಲಭ್ಯವಾಗಲಿ. ಆರೋಗ್ಯ ಮತ್ತು ಆಯುಷ್ಯ ಭಾಗ್ಯ ನಿಮ್ಮದಾಗಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಶಿಷ್ಯ ನಿಂದ ಗುರುವಿಗೆ ಜನ್ಮ ದಿನದ ಶುಭಾಶಯಗಳು ಸಂದಿವೆ.