ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ
ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹುಲಿಯಾ
2022-23ನೇ ಸಾಲಿನ ಬಜೆಟ್ ಮೇಲಿನ ಚರ್ಚೆ
ಜನ ವಿರೋಧಿ, ಜನದ್ರೋಹದ ಬಜೆಟ್ ಇದು
ಗೊತ್ತು ಗುರಿ ಇಲ್ಲ, ಮುನ್ನೋಟ ಇಲ್ಲದ ಬಜೆಟ್
ಬೆಂಗಳೂರು : ಬಜೆಟ್ ಮಂಡನೆ ಬಳಿಕ ನನಗೆ ಅನಿಸುತ್ತೆ ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ, ಜನ ವಿರೋಧಿ, ಜನದ್ರೋಹದ ಬಜೆಟ್ ಇದು ಎಂದು ರಾಜ್ಯ ಸರ್ಕಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಕಲಾಪದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬೊಮ್ಮಾಯಿ ಬಜೆಟ್ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ ಎಂದು ಬೇಸರ ಹೊರಹಾಕಿದರು.
ಬಜೆಟ್ ಅನ್ನೋದು ಇದು ಪ್ರತಿ ಕುಟುಂಬಸ್ಥರ ಬಜೆಟ್ ಆಗಿರುತ್ತೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡಿಸಬೇಕು. ನಾನು ಮಂಡಿಸದ ಬಜೆಟ್‌ನಲ್ಲೂ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಪ್ರಾಮಾಣಿಕವಾದ ಪ್ರಯತ್ನ, ಪಾರದರ್ಶಕವಾದ ಬಜೆಟ್ ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಕೇಂದ್ರದಲ್ಲೂ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ. ಎರಡೂ ಕಡೆ ಒಂದೇ ಸರ್ಕಾರ ಇದ್ದರೇ ಜನರು ಸಂಪೃತ್ತರಾಗಿರುತ್ತಾರೆ ಅಂತಾ ಭಾಷಣ ಮಾಡಿದ್ರೀ. ಆದ್ರೆ ನಿಮ್ಮ ಬಜೆಟ್ ಮಂಡನೆ ಬಳಿಕ ನನಗೆ ಅನಿಸುತ್ತೆ ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಅಂತಾ ಗುಡುಗಿದರು.
ಅಲ್ಲ ಜನ ವಿರೋಧಿ, ಜನದ್ರೋಹದ ಬಜೆಟ್ ಇದು. ಗೊತ್ತು ಗುರಿ ಇಲ್ಲ, ಮುನ್ನೋಟ ಇಲ್ಲದ ಬಜೆಟ್ ಆಗಿದೆ. ಬಜೆಟ್ ನಲ್ಲಿ ವಲಯವಾರು ಮಾಹಿತಿ ಸಿಗುತ್ತಿಲ್ಲ ಅಂತಾ ಕಿಡಿಖಾರಿದ್ದಾರೆ. siddaramaiah Criticises Govt On Budget at vidhasabha









