ಹಿಂದೂ – ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ತುಂಬಾ ಜನರಿದ್ದಾರೆ : ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದಲ್ಲಿ ಲವ್ ಜಿಹಾದ್ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ತರಲು ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿ ತರಲು ಉದ್ದೇಶಿಸಿರುವ ಗೋಹತ್ಯೆ ನಿಷೇಧ ಕಾನೂನು ವಿಚಾರವಾಗಿ ಇಂದು ಮುಸ್ಲಿಂ ಮುಖಂಡರ ನಿಯೋಗ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿತ್ತು.
ಇವರ ಜೊತೆ ಸಮಾಲೋಚನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ, ಕೇಂದ್ರ ವಿವೇಕ ಇಲ್ಲದೆ ಕಾನೂನು ತರುತ್ತಿದೆ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮದುವೆ ಅವರವರ ವೈಯುಕ್ತಿಕ ಆಯ್ಕೆ. ಈ ದೇಶದಲ್ಲಿ ಮುಸಲ್ಮಾನರು ಮೊಘಲರು 600 ವರ್ಷಗಳಿಂದ ಇದ್ದಾರೆ. ಎಷ್ಟೋ ಸಂಬಂಧಗಳು ಬೆಳೆದು ಬಿಟ್ಟಿದ್ದಾವೆ. ಪಕ್ಷದಲ್ಲಿ ಮುಸುಕಿನ ಗುದ್ದಾಟ : ಸತ್ಯ ಒಪ್ಪಿಕೊಂಡ ವಿಜಯೇಂದ್ರ
ಹಿಂದೂ- ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಬಹಳ ಜನ ಇದ್ದಾರೆ. ನನ್ನ ಪ್ರಕಾರ ಇದೊಂದು ಮೂರ್ಖತನ. ಇದನ್ನು ಸಂವಿಧಾನ ಅನುಮತಿಸುವುದಿಲ್ಲ. ಕೋರ್ಟಿಗೆ ಹೋದರೆ ವಜಾ ಆಗುತ್ತವೆ ಎಂದು ವಿವರಿಸಿದರು.
ಇನ್ನು ವಯಸ್ಸಿಗೆ ಬಂದ ಹೆಣ್ಣು ಅಥವಾ ಗಂಡು ಅವರ ಇಚ್ಛೆಯಂತೆ ಬದುಕಬಹುದು ಎಂದು ಇತ್ತೀಚೆಗಷ್ಟೇ ಅಲಹಬಾದ್ ಹೈಕೋರ್ಟ್ ಹೇಳಿದೆ..
ತೀರ್ಪಿನ ನಂತರವೂ ಕೇಂದ್ರ ಕಾನೂನು ಜಾರಿಗೆ ಮುಂದಾಗಿರುವುದು ದುರುದ್ದೇಶದ ಸಂಗತಿ ಆಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









