Siddaramaiah | ನಾಮಿನೇಷನ್ ಹಾಕ್ಬೇಕು ಅಂದಾಗ ಮತ್ತೆ ಚರ್ಚ್ ಗೆ ಬರ್ತೀನಿ
ಕೋಲಾರ : ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸೋದು ಬಹುತೇಕ ಫಿಕ್ಸ್ ಆಗಿದೆ.
ಇಂದು ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೋಲಾರದ ಮಂದಿಯಿಂದ ಸಿದ್ದರಾಮಯ್ಯಗೆ ಅದ್ದೂರಿ ಸ್ವಾಗತ ದೊರೆಯಿತು.
ಇತ್ತ ಸಿದ್ದರಾಮಯ್ಯ ಕೂಡ ಕೋಲಾರ ನಗರದಲ್ಲಿ ರೌಂಡ್ಸ್ ಹಾಕಿದರು. ಅದರಂತೆ ಮೆಥೋಡಿಸ್ಟ್ ಚರ್ಚ್ ಗೂ ಅವರು ಭೇಟಿ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ನಾಮಿನೇಷನ್ ಹಾಕಬೇಕು ಅಂದಾಗ ಮತ್ತೆ ಚರ್ಚ್ ಗೆ ಬರುತ್ತೇನೆ ಎಂದರು. ಆ ಮೂಲಕ ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದರು.
ಮುಂದುವರೆದು ಮಾತನಾಡಿದ ಅವರು, ನಾನು ಅಧಿಕಾರದಲ್ಲಿದ್ದಾಗ ಎಂದೂ ಭೇದ – ಭಾವ ಮಾಡಿಲ್ಲ.
ಮುಂದೆಯೂ ನಾನು ಮಾಡುವುದಿಲ್ಲ. ನಾವು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು.
ನಾನು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಪರವಾಗಿ ಇರುತ್ತೇನೆ ಎಂದು ಹೇಳಿದರು.