ಸಿದ್ದರಾಮಯ್ಯ ಮಾತನಾಡಿದ್ದು ಸರಿ : ವಿ.ಸೋಮಣ್ಣ ಅಚ್ಚರಿ ಹೇಳಿಕೆ
ಮಡಿಕೇರಿ : ಸಿದ್ದರಾಮಯ್ಯ ನವರ ಮೇಲೆ ನನಗೆ ಅಪಾರವಾದ ಗೌರವವಿದೆ, ಅವರು ಮಾತನಾಡಿರುವುದು ಸರಿ ಇದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತ್ತು.
ಹಾಗೇ ನನ್ನ ಸೋಲಿಗೆ ನನ್ನ ಪಕ್ಷದವರೂ ಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆ ಮಡಿಕೇರಿಯಲ್ಲಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನರೇಂದ್ರ ಮೋದಿ ಆಧುನಿಕ ಭಸ್ಮಾಸುರ : ವಿ.ಎಸ್.ಉಗ್ರಪ್ಪ
ಬೆನ್ನಿಗೆ ಚೂರಿ ಹಾಕಿದರು ಅನ್ನೋದು ಸಿದ್ದರಾಮಯ್ಯ ಅವರಿಗೆ ಈಗ ಅರ್ಥವಾಗಿದೆ. ಬೆನ್ನಿಗೆ ಚೂರಿ ಹಾಕೋ ಪಕ್ಷದಲ್ಲಿ ಇನ್ನೂ ಯಾಕೆ ಇದ್ದಾರೋ ಗೊತ್ತಿಲ್ಲ.
ಅವರು ಚೆನ್ನಾಗಿ ಯೋಚನೆ ಮಾಡಿ ಮುಂದಿನ ಒಳ್ಳೆಯ ಹೆಜ್ಜೆ ಇಡಲಿ. ಸಿದ್ದರಾಮಯ್ಯನವರು ಐದು ವರ್ಷ ಕಾಲ ಸಿಎಂ ಆಗಿದ್ದವರು.
ಅವರು ಪಕ್ಷವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸಿದವರು. ಅಂತಹವರಿಗೇ ಬೆನ್ನಿಗೆ ಚೂರಿ ಹಾಕುವುದಾದರೆ ಆ ಪಕ್ಷದಲ್ಲಿ ಯಾಕಿದ್ದಾರೆ ಎಂದು ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಅವರ ನೋವನ್ನ ನಿನ್ನೆ ಹೇಳಿಕೊಂಡಿದ್ದಾರೆ. ಅವರು ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳು. ಅವರ ಮೇಲೆ ನನಗೆ ಅಪಾರವಾದ ಗೌರವವಿದೆ ಅವರು ಮಾತನಾಡಿರುವುದು ಸರಿ ಇದೆ ಎಂದು ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









