ಸಿದ್ದರಾಮಯ್ಯ ಪರ್ಸಂಟೇಜ್ ಕಿಂಗ್ : ಕೆ.ಎಸ್.ಈಶ್ವರಪ್ಪ Siddaramaiah saaksha tv
ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಪರ್ಸಂಟೇಜ್ ಕಿಂಗ್ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಸರ್ಕಾರ ಎಲ್ಲ ಇಲಾಖೆಯಲ್ಲಿ ಕಾಮಗಾರಿಯ ಗುತ್ತಿಗೆಗೆ 40 ಪಸೆರ್ಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಇಂದು ಮೈಸೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಎಷ್ಟು ಪಸೆರ್ಂಟ್ ಕಮಿಷನ್ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಚಾಮುಂಡೇಶ್ವರಿಯಲ್ಲಿ ಅವರು ಸೋತಿದ್ದೇ ಸಾಕ್ಷಿ.
ಎಷ್ಟು ಪಸೆರ್ಂಟ್ ತೆಗೆದುಕೊಳ್ಳುತ್ತಿದ್ದರು ಎಂದು ಜನ ತೀರ್ಮಾನ ಮಾಡಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಉರುಳಿಸಿದ್ದಾರೆ.
ಪರ್ಸಂಟೇಜ್ ಕಿಂಗ್ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು.
ಇನ್ನು ಸಿದ್ದರಾಮಯ್ಯ ನವರು 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲಲ್ಲ ಎಂದಿದ್ದರು.
ಆದರೆ, ಅವರಿಗೆ ಒಂದು ಸೀಟು ಗೆಲ್ಲುವ ಸ್ಥಿತಿ ಬಂತು. ಹಾಗಾಗಿ, ಪರ್ಸಂಟೇಜ್ ಸರ್ಕಾರ ಏನಿದ್ದರೂ ಕಾಂಗ್ರೆಸ್ ನದ್ದು ಎಂದು ಹೇಳಿದ್ದಾರೆ.









