ಸಿಂಪತಿ ಇಲ್ಲ, ಇದ್ದಿಂದು ಇದ್ದಂಗೆ ಹೇಳುವವನು ನಾನು : ಸಿದ್ದರಾಮಯ್ಯ
ಬೆಂಗಳೂರು : ನಾನು ಯಾರಿಗೂ ಸಿಂಪತಿ ತೋರಲ್ಲ. ಇದ್ದಿಂದು ಇದ್ದಂಗೆ ಹೇಳುವವನು ನಾನು ಎಂದು ಬಾಂಬೆ ಫ್ರೆಂಡ್ಸ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಯಾರಿಗೂ ಸಿಂಫತಿ ತೋರಲ್ಲ. ಇದ್ದಿಂದು ಇದ್ದಂಗೆ ಹೇಳುವವನು ನಾನು.
ನಮ್ಮ ಪಕ್ಷ ಬಿಟ್ಟು, ಸರ್ಕಾರ ಬೀಳಿಸಿ ಹೋದವರ ಬಗ್ಗೆ ಸಿಂಪತಿ ಬರುತ್ತಾ…? ಸುಧಾಕರ್ ಗೆ ಎಂದು ಸಿಡಿ ಇದೆ ಗೋತ್ತಿರಬೇಕು. ಹಾಗಾಗಿ, ಷಡ್ಯಂತ್ರ ಅಡಗಿದೆ ಎಂದಿದ್ದಾರೆ ಎಂದು ಹೇಳಿದ್ರು.
ಬಳಿಕ ಬಜೆಟ್ ಬಗ್ಗೆ ಮಾತನಾಡಿ, ಈ ಸರ್ಕಾರದಲ್ಲಿ ಯಾವ ನಿರೀಕ್ಷೆ ಇಟ್ಟುಕೊಳ್ಳಂಗಿಲ್ಲ. ಹೊಸ ಕಾರ್ಯಕ್ರಮ ಮಾಡಲು ಹಣ ಇಲ್ಲ.ಹಳೆ ಯೋಜನೆ ಮುಂದುವರಿಸಲು ದುಡ್ಡಿಲ್ಲ.
ಹೊರ ಬಂದ ನಂತರ ಬಜೆಟ್ ಜನಪ್ರಿಯನ ಅಲ್ವ ಅಂತ ಗೊತ್ತಾಗಲಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಮಳೆಯರಿಗೆ, ಎಲ್ಲರಿಗೂ ಒತ್ತು ಕೊಡ್ತಿನಿ ಅಂತಾರೆ, ಅನುಷ್ಠಾನ ಆಗಲ್ಲ. ರೈತ ಸಾಲಮನ್ನಾ , 500 ಕೋಟಿ ಅವರ್ಥ ನಿಧಿ ಇಡುವುದಾಗಿ ಹೇಳಿದ್ರು ಇಟ್ರಾ ಎಂದು ಪ್ರಶ್ನಿಸಿದ್ರು.
ಯಡಿಯೂರಪ್ಪ ನವರ ಮನೆ ದೇವ್ರು ಸುಳ್ಳು. ಜನ ಹೇಸಿಗೆ ಪಡುವಷ್ಟು ರಾಜಕಾರಣ ಹೀಗಾಗಿರಲಿಲ್ಲ. ಯಾರೋ ಮಾಡುವ ತಪ್ಪಿಗೆ ಜನ ರಾಜಕಾರಣಿಗಳನ್ನು ಲಫಂಗರು ಎಂದು ಶಪಿಸುವಂತಾಗಿದೆ ಎಂದು ಸದ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಸಿದ್ದರಾಮಯ್ಯ ಬೇಸರ ಹೊರಹಾಕಿದ್ರು.
ಸಂಗೇಶ್ವರ್ ಬಗ್ಗೆ ಮಾತನಾಡಿ, ಬಿಜೆಪಿ ಸರಕಾರದಲ್ಲಿ ಎಲ್ಲರೂ ಕಳ್ಳರೇ.ಯಾರೂ ಸಹಚರಿಲ್ಲ. ಸಂಗಮೇಶ್ವರ್ ಪುತ್ರರನ್ನ ಬಂಧಿಸಲಾಗಿದೆ. ಸುಳ್ಳು ಕೇಸ್ ಹಾಕಿ ಹೆದುರಿಸಲಾಗ್ತಿದೆ. ಈಶ್ವರಪ್ಪ, ಯಡಿಯೂರಪ್ಪ ಪುತ್ರ ಈ ರೀತಿ ಮಾಡಿದ್ದಾರೆ. ಸುಳ್ಳು ಮೊಕದ್ದಮೆ ಹಾಕಿದ್ದಾರೆ. ಅಧಿವೇಶನದಲ್ಲಿ ಈ ವಿಚಾರವಾಗಿ ಮಾತಾಡುವೆ ಎಂದರು.