Siddaramaiah | ರೈತರ ಕಷ್ಟಕ್ಕೆ ಸ್ಪಂದಿಸದ ಸಿದ್ದರಾಮಯ್ಯ ವಿರುದ್ಧ ಜನ ಆಕ್ರೋಶ
ಬಾಗಲಕೋಟೆ : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ರೈತರ ಬೆಳೆಗಳು ನಾಶವಾಗಿವೆ.
ಇಷ್ಟಾದ್ರೂ ಸಿದ್ದರಾಮಯ್ಯ ಕ್ಷೇತ್ರದ ಕಡೆ ಮುಖ ಮಾಡದೇ ಇರುವುದಕ್ಕೆ ಜನರು ಆಕ್ರೋಶಗೊಂಡಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಹಳ್ಳ ಕೊಳ್ಳಗಳು ತುಂಬಿ ತುಳುಕುತ್ತಿದ್ದು, ಜಮೀನುಗಳು ಜಲಾವೃತಗೊಂಡಿವೆ.
ಗುಳೇದಗುಡ್ಡ ತಾಲ್ಲೂಕಿನ ಅಲ್ಲೂರ್ ಎಸ್.ಪಿ ಗ್ರಾಮದಲ್ಲಿ ಸೂರ್ಯಪಾನ,ಸಜ್ಜಿ, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗಿವೆ.
ನಾಶವಾಗಿರುವ ಈರುಳ್ಳಿ ಕೈಯಲ್ಹಿಡಿದು ರೈತರು ಕಣ್ಣೀರು ಹಾಕುತ್ತಿದ್ದಾರೆ. ತ್ವರಿತಗತಿಯಲ್ಲಿ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಇತ್ತ ಭಾರಿ ಮಳೆಗೆ ಆಸಂಗಿ ಬ್ಯಾರೇಜ್ ಸಂಪರ್ಕ ಕಡಿತಗೊಂಡಿದೆ.
ಮಲಪ್ರಭಾ ನದಿ ನೀರು ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಬ್ಯಾರೇಜ್ ಭರ್ತಿ ಸಂಪೂರ್ಣ ಭರ್ತಿಯಾಗಿವೆ. ಇದರಿಂದ ಅಕ್ಕಪಕ್ಕದಲ್ಲಿರುವ ಹೊಲಗಳಿಗೂ ನೀರು ನುಗ್ಗಿದೆ. siddaramaiah-Public outrage against Siddaramaiah saaksha tv