ಬೆಂಗಳೂರು : ಪತ್ರಿಕೋದ್ಯಮವು ಗೌರವಾನ್ವಿತ ವೃತ್ತಿಯಾಗಿದ್ದು, ಇದು ಪ್ರಜಾಪ್ರಭುತ್ವದ 3 ಸ್ತಂಭಗಳನ್ನು ಮೌಲ್ಯಮಾಪನ ಮಾಡಲು ಜನರಿಗೆ ಅನುವು ಮಾಡಿಕೊಡುತ್ತದೆ. ಆದರೆ ಅರ್ನಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿ ಪತ್ರಿಕೋದ್ಯಮವನ್ನು ಹೇಗೆ ನಡೆಸಬಾರದು ಎಂಬುದಕ್ಕೆ ಉದಾಹರಣೆಗಳಾಗಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಪಾಲ್ಘರ್ ಸಾಧುಗಳ ಹತ್ಯೆ ಪ್ರಕರಣ ಕುರಿತಾಗಿ ಸೋನಿಯಾ ಗಾಂಧಿಯವರು ಏಕೆ ಮೌನ ವಹಿಸಿದ್ದಾರೆ, ಅಲ್ಪಸಂಖ್ಯಾತರಿಗೆ ಹೀಗೆ ಆಗುತ್ತಿದ್ದರೆ ಅವರು ಸುಮ್ಮನೆ ಇರುತ್ತಿದ್ದರೆ ಎಂದು ಕೇಳಿ ರಿಪಬ್ಲಿಕ್ ಟಿವಿಯಲ್ಲಿ ಅರ್ನಬ್ ಗೋಸ್ವಾಮಿ ಚರ್ಚೆ ನಡೆಸಿದ್ದರು.
ಈ ಚರ್ಚಾ ಕಾರ್ಯಕ್ರಮವನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಸಂಬಂಧವಿಲ್ಲದ ವಿಷಯವೊಂದರಲ್ಲಿ ಸೋನಿಯಾ ಗಾಂಧಿಯನ್ನು ಉಲ್ಲೇಖಿಸುವುದು ಮಾನಹಾನಿಕರ ಮತ್ತು ಅವರಲ್ಲಿ ಒಬ್ಬ ಸ್ತ್ರೀದ್ವೇಷಿಯನ್ನು ಬಹಿರಂಗಪಡಿಸಿದೆ” ಎಂದು ಅರ್ನಬ್ ಗೋಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Journalism is an honorable profession that enables ppl to evaluate 3 pillars of democracy
But #ArnabGoswami & @republic are examples of how NOT to do journalism
Referencing Sonia Gandhi in an unrelated issue is libellous & has exposed a misogynist in him.#ArrestAntiIndiaArnab pic.twitter.com/TGChMoo7h1
— Siddaramaiah (@siddaramaiah) April 22, 2020
ಇನ್ನು “ಸೋನಿಯಾ ಗಾಂಧಿ ನಮ್ಮೆಲ್ಲರಂತೆ ಭಾರತೀಯರು. ಅವರು ಖಂಡಿತವಾಗಿಯೂ ಅರ್ನಬ್ ಗೋಸ್ವಾಮಿಗಿಂತ ಹೆಚ್ಚು ಭಾರತೀಯರು. ಅವರು ನಮ್ಮ ದೇಶದಲ್ಲಿ ಸಾಮರಸ್ಯ ಮತ್ತು ಸಹೋದರತ್ವವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಮತ್ತೊಂದೆಡೆ ಅರ್ನಬ್ ತನ್ನ ವಿಷದ ಮೂಲಕ 4ನೇ ಸ್ತಂಭವನ್ನು ದುರ್ಬಲಗೊಳಿಸಿದ್ದಾರೆ” ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.








