ಸಿಎಂ ಬದಲಾವಣೆ | ನಾನು ಮೊದಲೇ ಹೇಳಿದ್ದೆ ಎಂದ ಸಿದ್ದರಾಮಯ್ಯ
ಬೆಂಗಳೂರು : ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಅಂತ ನಾನು ಮೊದಲೇ ಹೇಳಿದ್ದೆ. ಆಗ ಯಾರು ನಂಬಿರಲಿಲ್ಲ, ಈಗ ಆ ಕಾಲ ಸನ್ನಿಹಿತವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಸಿದ್ದರಾಮಯ್ಯ, ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾಗಬೇಕು. ಯಡಿಯೂರಪ್ಪ ಬದಲಾವಣೆಯಿಂದ ಕಾಂಗ್ರೆಸ್ಗೆ ಪ್ಲಸ್ ಮೈನಸ್ ಮುಖ್ಯ ಅಲ್ಲ. ಒಬ್ಬ ಭ್ರಷ್ಟ ಸಿಎಂ ಹೋಗ್ತಿದ್ದಾರೆ ಅನ್ನೋದು ಮುಖ್ಯ ಎಂದರು.
ಇದೇ ವೇಳೆ ಕಟೀಲ್ ಆಡಿಯೋ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕಟೀಲ್ ಹೇಳಿಕೊಂಡಿರಬಹುದು. ಶೆಟ್ಟರ್ ಮತ್ತು ಈಶ್ವರಪ್ಪ ಅವರನ್ನು ಬದಲಾವಣೆ ಮಾಡುವ ಬಗ್ಗೆಯೂ ಕಟೀಲ್ ಆಡಿಯೋದಲ್ಲಿ ಹೇಳಿದ್ದಾರೆ. ಸಿಎಂ ಬದಲಾದ ಮೇಲೆ ಕೆಲವು ಸಚಿವರ ಬದಲಾವಣೆ ಕೂಡ ಆಗಬಹುದು. ಆದರೆ, ಅದು ತಾವು ಹೇಳಿದ್ದಲ್ಲ, ಆಡಿಯೋ ನನ್ನದಲ್ಲ ಅಂತ ಕಟೀಲ್ ಹೇಳಿಕೊಂಡಿದ್ದಾರೆ. ಆಡಿಯೋ ಬಗ್ಗೆ ತನಿಖೆ ನಡೆಸಲು ಸಿಎಂಗೆ ಮನವಿ ಮಾಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.









