Siddaramaiah | ಮೂರು ದಿನಗಳಲ್ಲಿ 3 ಕೊಲೆ.. ಹೊಣೆ ಯಾರು
ಬೆಂಗಳೂರು : ಭಾನುವಾರ ಸಂಜೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸೋಮವಾರ ಮೆರವಣಿಗೆ ಮಾಡಿದ್ದಾರೆ.
ಈಗಾಗಲೇ ಹರ್ಷನ ಕೊಲೆಯನ್ನ ಖಂಡಿಸಿದ್ದೇನೆ. ಕಳೆದ ಮೂರು ದಿನಗಳಲ್ಲಿ ಮೂರು ಕೊಲೆಯಾಗಿದೆ. ಇದಕ್ಕೆ ಹೊಣೆ ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಹೋಮ್ ಮಿನಿಸ್ಟರ್, ಈಶ್ವರಪ್ಪ ಅದೇ ಜಿಲ್ಲೆಯವರು.
144 ಸೆಕ್ಷನ್ ಜಾರಿ ಇರುವಾಗ ಮೆರವಣಿಗೆ ಮಾಡಲು ಯಾಕೆ ಅವಕಾಶ ಕೊಟ್ಟರು. ಸಂಸದ ರಾಘವೇಂದ್ರ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.
ಸರ್ಕಾರದ ಪ್ರಾಯೋಜಿತ ಮೆರವಣಿಗೆ. ಕಲ್ಲು ತೂರಾಟ ನಡೆಯುತ್ತದೆ. ಒಬ್ಬ ಸಚಿವ, ಒಬ್ಬ ಸಂಸದ ಇದ್ದು 144 ಸೆಕ್ಷನ್ ಉಲ್ಲಂಘನೆ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಶಿವಮೊಗ್ಗದಲ್ಲಿ ಆಸ್ತಿ ಪಾಸ್ತಿಗೆ ಹಾನಿಯಾಗಿದ್ದರೇ, ಅದಕ್ಕೆ ಬಿಜೆಪಿ ,ಬಜರಂಗದಳ, ಕಾರಣ. ದೊನ್ನೆ,ಕತ್ತಿ, ತಲ್ವಾರ್ ಹಿಡ್ಕೊಂಡು ಮೆರವಣಿಗೆ ಮಾಡಿದ್ದಾರೆ.
ಇದು ಮಾನವೀಯತೆ ಸರ್ಕಾರನಾ..? ಇದು ಗೂಂಡಾಗಳ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸರ್ಕಾರದ ಅವರದ್ದೆ ಇದೆ. CFI ,SDPI ಬಗ್ಗೆ ಸಾಕ್ಷಿಗಳ ಇದ್ದರೆ ಬ್ಯಾನ್ ಮಾಡಲಿ. ಇದಕ್ಕೆ ನಮ್ಮ ತಕರಾರು ಇಲ್ಲ. ಸಾರ್ವಜನಿಕರ ಆಸ್ತಿ ಹಾನಿಯಾಗಿದೆ.
ಮಾಧ್ಯಮದವರ ಮೇಲೆ ಹಲ್ಲೆ ಆಗಿದೆ. ಇದು ಸರ್ಕಾರದ ಜವಾಬ್ದಾರಿನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಷ್ಟ್ರೀಯ ಖಾಸಗಿ ವಾಹಿನಿಗೆ ಸಂದರ್ಶನ ಕೊಟ್ಟಿದ್ದಾರೆ.
ಈಶ್ವರಪ್ಪ ಅವರ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ. ನಮ್ಮ ಹೋರಾಟ ಸರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ನಾವು ಒತ್ತಾಯ ಮಾಡ್ತೇವೆ. ಈಶ್ವರಪ್ಪ ಅವರನ್ನು ವಜಾ ಮಾಡಬೇಕು, ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಆಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.









