ಸಿದ್ದರಾಮಯ್ಯ ರೆಸಾರ್ಟ್ ಸೇರಿದ್ದು ಯಾಕೆ..? ಇನ್ ಸೈಡ್ ಸ್ಟೋರಿ.. Siddaramaiah Resort politics saaksha tv
ಮೈಸೂರು : ರಾಜಕೀಯದಲ್ಲಿ ಸದಾ ಆಕ್ಟೀವ್ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸದ್ಯ ಮೈಸೂರಿನ ಕಬಿನಿ ಹಿನ್ನಿರಿನ ಹೆಗ್ಗಡೆ ದೇವನ ಕೋಟೆ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದಾರೆ. ಮೂಲಗಳ ಪ್ರಕಾರ ಸಿದ್ದರಾಮಯ್ಯ ಮೈಸೂರಿನ ಅತ್ಯಾಪ್ತರೊಂದಿಗೆ ರಹಸ್ಯ ಸಭೆ ನಡೆಸಿದ್ದಾರಂತೆ. ಸಭೆಯಲ್ಲಿ ಸಿದ್ದರಾಮಯ್ಯ ಇಮೇಜ್ ಹೆಚ್ಚಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆಯಂತೆ. ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ, ಪಿರಿಯಾಪಟ್ಣಣ ವೆಂಕಟೇಶ್, ಅನಿಲ್ ಚಿಕ್ಕಮಾಧು, ಧ್ರುವ ನಾರಾಯಣ್, ಮಂಜುನಾಥ್, ಹಂಪನಗೌಡ ಬಾದರ್ಲಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು ಎನ್ನುವ ಮಾಹಿತಿ ಇದೆ.
ಸಭೆಯಲ್ಲಿ ಸಿದ್ದು ಆಪ್ತರು, ಇಮೇಜ್ ಹಾಳು ಮಾಡುತ್ತಿರುವ ನಾಯಕರನ್ನು ದೂರವಿಡಲು ಸಲಹೆ ನೀಡಿದ್ದಾರಂತೆ.
ಆಪ್ತ ಬಣದ ಪ್ರಕಾರ ಸದ್ಯಕ್ಕೆ ಯಾರ್ಯಾರನ್ನ ದೂರು ಇಡಬೇಕು…? ಯಾಕಾಗಿ ದೂರ ಇಡಬೇಕು….?
1 ಜಮೀರ್ ಅಹ್ಮದ್
ಜಮೀರ್ ಅಹ್ಮದ್ ಸಿದ್ದರಾಮಯ್ಯ ಜೊತೆ ಇದ್ದವರು. ಹೋದಲ್ಲಿ ಬಂದಲ್ಲಿ ಜಮೀರ್ ಸಿದ್ದರಾಮಯ್ಯ ಜಪ ಮಾಡುತ್ತಿದ್ದರು. ಆದ್ರೆ ಇದರಿಂದ ಸಿದ್ದರಾಮಯ್ಯ ಅವರ ಜೊತೆ ಇದ್ದ ಹಿರಿಯ ನಾಯಕರು ಅವರಿಂದ ದೂರ ಆದರು. ಮುಖ್ಯವಾಗಿ ಸಿದ್ದು ಆಪ್ತರೆಂದೇ ಕರೆಯಲಾಗುತ್ತಿದ್ದ ಸಿ.ಎಂ.ಇಬ್ರಾಹಿಂ, ಸಿದ್ದರಾಮಯ್ಯ ಅವರ ಕೈ ಬಿಟ್ಟರು. ಇದಲ್ಲದೇ ಇಡಿ, ಐಟಿ ದಾಳಿ ಬಳಿಕ ಸಿದ್ದರಾಮಯ್ಯ ಗೆ ಕಪ್ಪು ಚುಕ್ಕೆ.
2 ಅಶೋಕ್ ಪಟ್ಟಣ್
ಪದೇ ಪದೇ ಸುತ್ತಮುತ್ತಲು ಸುಳಿದು ಅನಗತ್ಯ ಕಿರಿಕಿರಿ ಮಾಡುತ್ತಿದ್ದಾರೆ. ಅನಗತ್ಯ ಮಾತನಾಡಿ ವಿವಾದ ಸೃಷ್ಟಿಸುತ್ತಿದ್ದಾರೆ. ಸಿದ್ದರಾಮಯ್ಯ ಆಪ್ತ ಎಂಬಂತೆ ತೋರಿಸಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚು ಜೊತೆಗೆ ಕಾಣಿಸಿಕೊಳ್ಳುತ್ರಿದ್ದಾರೆ.
3 ಉಗ್ರಪ್ಪ
ಮಾತಿನಲ್ಲಿ ಏನಾದರು ವಿವಾದ ಮಾಡಿಕೊಳ್ಳುವ ಸಾಧ್ಯತೆ. ಸಲೀಂ ಪ್ರಕರಣದ ನಂತರ ಸ್ವಲ್ಪ ದೂರವಿದ್ದಾರೆ ದೂರವೇ ಇರಲಿ. ಅವರು ಎಲ್ಲಾ ನಾಯಕರ ಜೊತೆಯು ಬೆರೆಯುತ್ತಾರೆ ನಿಮ್ಮ ಆಪ್ತ ಒಲಯಕ್ಕೆ ಬೇಡ ಎಂದು ಸಿದ್ದರಾಮಯ್ಯ ಅವರಿಗೆ ಆಪ್ತರು ಸಲಹೆ ನೀಡಿದ್ದಾರಂತೆ.
ಕೇವಲ ಇವರನ್ನು ಮಾತ್ರ ವಲ್ಲದೇ ಪ್ರಕಾಶ್ ರಾಥೋಡ್ ಸೇರಿದಂತೆ ಇನ್ನೂ ಕೆಲವರ ಹೆಸರುಗಳನ್ನು ಉಲ್ಲೇಖಿಸಿ ಅವರಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.