Siddaramaiah – ಬಿಜೆಪಿಯವರು ಅಂದರೆ ಡೋಂಗಿಗಳು
ಶಿವಮೊಗ್ಗ : ಬಿಜೆಪಿಯವರು ಅಂದರೆ ಡೋಂಗಿಗಳು ಸುಳ್ಳು, ಹೇಳುವವರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಸಂಕಲ್ಪ ಯಾತ್ರೆ ಬಗ್ಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ತೊಲಗಬೇಕು ಎಂಬುದೇ ಬಿಜೆಪಿಯವರ ಸಂಕಲ್ಪ.
ಅವರು ಕಾರ್ಯಕ್ರಮಕ್ಕೆ ಹಣ ಕೊಟ್ಟು ಜನರನ್ನ ಕರೆದುಕೊಂಡು ಬಂದಿದ್ದಾರೆ.
ಅದಕ್ಕಾಗಿಯೇ ಕಾರ್ಯಕ್ರಮದಲ್ಲಿ ಜನರು ಕುಳಿತುಕೊಳ್ಳುತ್ತಿಲ್ಲ.

ಬಿಜೆಪಿಯವರು ಅಂದರೆ ಡೋಂಗಿಗಳು, ಸುಳ್ಳು ಹೇಳುವವರು ಎಂದು ವ್ಯಂಗ್ಯವಾಡಿದರು.
ಮುಂದುವರೆದು ಬಿಜೆಪಿಯವರಿಗೆ ಯಾವುದೇ ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇಲ್ಲ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ.
ಆರ್ ಎಸ್ ಎಸ್ ನವರು ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ವಿರೋಧಿಗಳ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.








