ಮೈಸೂರು : ಸಿದ್ದರಾಮಯ್ಯ ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ. ಒಂದು ಪಕ್ಷದ ರಾಜ್ಯಧ್ಯಕ್ಷರನ್ನು ಕಾಡುಮನುಷ್ಯ ಅನ್ನೋದು ಸರಿಯೇ..? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್ ಸಿ ಹೆಚ್ ವಿಶ್ವನಾಥ್ ಗರಂ ಆಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಡು ಮನುಷ್ಯ ಎಂಬ ಸಿದ್ದರಾಮಯ್ಯರ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯನವರೇ ನೀವೂ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು.
ನಿಮ್ಮ ಮಾತನ್ನು ವಾಪಾಸ್ ಪಡೆಯಿರಿ. ನೀವು ಆಸ್ಥಾನದ ವಿದೂಷಕರ ರೀತಿ ವರ್ತಿಸದಿರಿ. ನೀವು ಬಳಸಿರುವ ಭಾಷೆಯನ್ನು ಯಾರೂ ಒಪ್ಪುವುದಿಲ್ಲ.
ಇದು ಕಾಡಿನ ಜನರಿಗೆ ಮಾಡಿರುವ ಅವಮಾನ. ನೀವು ಕಾಡಿನ ಜನರನ್ನ ಹೀಯಾಳಿಸಿದ್ದೀರಿ.
ಇದನ್ನೂ ಓದಿ : ಕೈ-ಕಮಲ `ಕಾಡುಮನುಷ್ಯ’ ಕಿತ್ತಾಟ; ಹುಲಿಯಾ ಏಟಿಗೆ ಬಿಜೆಪಿ ಕೊಟ್ಟ ತಿರುಗೇಟು ಹೇಗಿದೆ ಗೊತ್ತಾ..!
ಸಿದ್ದರಾಮಯ್ಯ ಅವರಿಗೆ ಏಕವಚನ, ಬಹುವಚನಕ್ಕೆ ವ್ಯತ್ಯಾಸ ಗೊತ್ತಿಲ್ಲ. ಸುಮ್ಮನೆ ಬೇರೆಯವರಿಗೆ ಸಂಧಿ ಪಾಠ ಮಾಡುತ್ತಾರೆ.
ಪ್ರಬುದ್ಧ ಎಂದು ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗುತ್ತಿದ್ದಾರೆ. ಜನ ನಿಮ್ಮ ತಲೆ ಖಾಲಿಯಾಗಿದೆ, ವಿವೇಚನೆ ಇಲ್ಲ ಅಂದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಕಾಡು ಮನುಷ್ಯ ಎನ್ನುವುದು ಅರಣ್ಯ ಸಂರಕ್ಷಕರಿಗೆ ಮಾಡುವ ಅವಮಾನ. ಈಗ ಎಷ್ಟೋ ಜನ ನಾವು ಕಾಡು ಜನ ಎಂದು ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಒಂದು ಪಕ್ಷದ ರಾಜ್ಯಧ್ಯಕ್ಷರನ್ನು ಕಾಡುಮನುಷ್ಯ ಅನ್ನೋದು ಸರಿಯೇ? ಸಿದ್ದರಾಮಯ್ಯ ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ ಎಂದು ಹೆಚ್. ವಿಶ್ವನಾಥ್ ಎಚ್ಚರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel