Siddaramaih
ನಾನು ಮತ್ತೊಮ್ಮೆ ಸಿಎಂ ಆದ್ರೆ 10 ಕೆಜಿ ಅಕ್ಕಿ ಕೊಡುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಜನರ ಅವಹಾಲು ಸ್ವೀಕರಿಸಿದ ಸಿದ್ದರಾಮಯ್ಯನವರು ಕೆಲ ಸಮಸ್ಯೆಗಳ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದೇ ವೇಳೆ ಅಕ್ಕಿ ಕೊಡುತ್ತಿರುವುದು ಕಡಿಮೆಯಾಗಿದೆ ಎಂಬ ವಿಚಾರ ತಿಳಿದ ಸಿದ್ದರಾಮಯ್ಯನವರು, ಸರ್ಕಾರದ ನಡೆ ವಿರುದ್ಧ ಗರಂ ಆಗಿದ್ದಾರೆ. ಅಕ್ಕಿ ಕಡಿಮೆ ಮಾಡಲಾಗಿದೆ ಎಂಬ ವಿಚಾರ ಕೇಳಿ 3 ಕೆಜಿ ಹೆಚ್ಚು ಮಾಡುವುದಾಗಿ ಹೇಳಿ ಕಡಿಮೆ ಮಾಡಿದ್ದಾರಾ ಎಂದು ಅಸಮಾಧಾನ ಹೊರಹಾಕಿದ್ದಾರೆ.
`ಕುಣಿಲಾರದವರು ನೆಲ ಡೊಂಕು ಎಂಬಂತಾಗಿದೆ ಕುಮಾರಸ್ವಾಮಿ ಪರಿಸ್ಥಿತಿ’ : ಸಿದ್ದರಾಮಯ್ಯ
ಅಲ್ಲದೇ ಜನರು ಯಾರೂ ಹಸಿವಿನಿಂದ ಮಲಗಬಾರದು, ಹೊಟ್ಟೆ ತುಂಬ ಊಟ ಮಾಡಬೇಕು. ಬರಗಾಲ, ಪ್ರವಾಹ ಬಂದ್ರೆ ಏನೇ ಇದ್ರೂ ಹೊಟ್ಟೆ ತುಂಬ ಊಟ ಇದ್ರೆ ಜನ ನೆಮ್ಮದಿಯಾಗಿ ಇತಾ9ರೆ. ಇದೊಂದು ದುಡ್ಡಿಲ್ಲದ ದರಿದ್ರ ಸಕಾ9ರ. ಸಂಬಳ ಕೊಡೋಕೆ ಸಕಾ9ರದ ಬಳಿ ದುಡ್ಡಿಲ್ಲ. ನಾನು ಸಿಎಂ ಆಗಿದ್ದಾಗ ಖಜಾನೆ ಯಾವಾಗಲೂ ಭತಿ9 ಆಗಿರುತ್ತಿತ್ತು..ಈಗ ದುಡ್ಡೇ ಇಲ್ಲ ಅಂತಿದ್ದಾರೆ. ಯಡಿಯೂರಪ್ಪ ಸಿಎಂ ಆದಮೇಲೆ ಒಂದು ಪೈಸೇನೂ ಇಲ್ಲ ಎಂದು ಲೇವಡಿ ಮಾಡಿದರು.
Siddaramaih
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








