ಸಿದ್ದೇಶ್ವರ ಅಪ್ಪಾಜಿ ಒಡನಾಟ ಸ್ಮರಿಸಿದ ಗವಿಸಿದ್ದೇಶ್ವರ ಶ್ರೀಗಳು…
ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ ಹಿನ್ನಲೆಯಲ್ಲಿ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಅವರ ಒಡನಾಟವನ್ನ ಸ್ಮರಿಸಿದ್ದಾರೆ.
ಸಿದ್ದೇಶ್ವರ ಅಪ್ಪಾಜಿ ಅವರು ಈ ಶತಮಾನದ ವ್ಯಕ್ತಿಗಳು, ಯುಪುರುಷರಯ ಅವರಿಗೆ ಯಾವುದೇ ಪಂಥಗಳಿರಲಿಲ್ಲ. ಯಾವುದೇ ಗ್ರಂಥಕ್ಕೆ ಅಂಟಿಕೊಳ್ಳಲಿಲ್ಲ ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ ವಸಂತ ಸಿದ್ದೇಶ್ವರ ಅಪ್ಪಾಜಿ ಅವರು ಅವರು ಸುಳಿದೆಡೆಯೆಲ್ಲ ಸುವಿಧಾನ, ಸಮಾಧಾನ. ಅವರು ನಿಂತ ನಿಲುವು ಸತ್ಯದ ಒಲವು, ಮಾಯ ಮುಟ್ಟದ ಕಾಯ, ಭ್ರಮೆ ಇಲ್ಲದ ಭಾವ. ಲೋಕಾಂತವನ್ನು ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು. ಚಿಂತೆಗಳ ಮಧ್ಯೆ ನಿಶ್ಚಿಂತನಾಗಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿದ ಜೀವನ್ಮುಕ್ತರು ಎಂದು ಗವಿಸಿದ್ದೇಶ್ವರ ತಿಳಿಸಿದ್ದಾರೆ.
ಅವರು 2017 ರಲ್ಲಿ ಗವಿಮಠ ಜಾತ್ರೆ ಉದ್ಘಾಟನೆಗೆ ಆಗಮಿಸಿದ್ದರು. 2000 ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯದ ಎರಡನೇ ಮಹಡಿ ಕಟ್ಟಡದ ಉದ್ಘಾಟನೆಗೆ ಆಗಮಿಸಿದ್ದರು. ಶಿಕ್ಷಣ ಕ್ಷೇತ್ರದ ವಿಚಾರ ಗೋಷ್ಠಿಯೊಂದಕ್ಕೆ ಶ್ರೀಮಠಕ್ಕೆ ಆಗಮಿಸಿ ತಮ್ಮ ಜ್ಞಾನದ ಮಾತು ಹರಿಸಿದ್ದರು. ಕೆಲವು ದಿನಗಳ ಹಿಂದೆ ನಾನು ಪೂಜ್ಯದ ದರ್ಶಕ್ಕೆ ಹೋಗಿದ್ದೆ ಆಗ ನಾವು ಹೊರಟು ನಿಂತಾಗ ಅವರು ನಮ್ಮನ್ನು ಕೆಲಹೊತ್ತು ನಿಲ್ಲಿಸಿ ಹಲವು ವಿಮರ್ಶೆ ಮಾಡಿದ್ದರು ನಾನು ಟೆಲಿಸನ್ ಕವಿಯ Iam an infent crying in night, crying for the light ಈ ಎರಡು ಸಾಲು ಹೇಳಿದ್ದೆ ಈ ಸಾಲುಗಳ ಬಗ್ಗೆ ಸುಮಾರು ಒಂದೂವರೆ ತಾಸು ವಿಮರ್ಶೆ ನಡೆಸಿ ಅದರ ತಿಳುವು, ಹೊಳವನ್ನು ತಿಳಿಸಿದರು.
ಅವರೊಬ್ಬ ಸದಾ ಜ್ಞಾನವನ್ನೇ ಪ್ರೀತಿಸಿ ಜನರ ಹೃದಯದಲ್ಲಿ ಜ್ಞಾನದ ದೀಪ ಹಚ್ಚಿದರು ಅವರ ದೇಹ ದೂರವಾಗಿರಬಹುದು, ಅವರ ದೇಹ ಕಣ್ಣಿನಿಂದ ದೂರವಾದರೂ, ಮಣ್ಣಿನಿಂದ ಮರೆಯಾದರೂ ಸಹ ಈ ನಾಡಿನ ಜನರ ಅಂತರಂಗದಲ್ಲಿ ಹಚ್ಚಿದ ಆರದ ದೀಪ ನಾವು ವರ್ಷಕ್ಕೊಂದು ಕಾರ್ತೀಕ ದೀಪ ಹಚ್ಚಿರಬಹುದು, ವರ್ಷಕ್ಕೊಂದು ಲಕ್ಷ ದೀಪೋತ್ಸವ ಮಾಡಿರಬಹುದು. ಸಿದ್ದೇಶ್ವರ ಶ್ರೀಗಳು ತಮ್ಮ ಜ್ಞಾನದ ಮಾತುಗಳ ಮೂಲಕ ವಿಶ್ವದ ಜನನಿಗೆ ಪ್ರತಿನಿತ್ಯ ಜ್ಞಾನದ ಆರತಿ ಮಾಡಿದರು.
ಅವರು ಹೋದಲ್ಲೆಲ್ಲ ಲಕ್ಷ ಲಕ್ಷ ಜನರು ಸೇರುತ್ತಿದ್ದರು. ಅವರ ಬದುಕೇ ನಿತ್ಯ ಕಾರ್ತಿಕೋತ್ಸವ ಗವಿಮಠ ಜಾತ್ರೆ ನೋಡಿ ಕವಿ ರವೀಂದ್ರರ ಮಾತುಗಳನ್ನು ನೆನಪಿಸಿಕೊಂಡರು ಈ ಜಗತ್ತಿನ ಜಾತ್ರೆ ನೋಡಲು ಮನುಷ್ಯರಿಗೆ ದೇವನು ನೀಡಿದ ಆಮಂತ್ರಣ ಎಂದು ಹೇಳಿದ್ದರು ಎಂದು ಸ್ಮರಿಸಿದ ಗವಿಶ್ರೀಗಳು.
Siddeshwara swamiji: Siddeshwara Appaji commemorated the association of Gavisiddeshwara Sri…