Siddharamaih : ಜನ ಸೇವೆಗಾಗಿ ನಾನು ಹೆಚ್ಚು ವರ್ಷ ಬದುಕಬೇಕು -ಸಿದ್ದರಾಮಯ್ಯ
ಮೈಸೂರು : ಜನ ಸೇವೆಗಾಗಿ ನಾನು ಹೆಚ್ಚು ವರ್ಷ ಬದುಕಬೇಕು, ನನಗೆ ಹೀಗಾಗಿ ಬಹಳ ವರ್ಷಗಳ ಕಾಲ ಬದುಕುವ ಆಸೆಯಿದೆ ಎಂದು ವಿಪಕ್ಷ ನಾಯಕ , ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..
ಡಾ. ಕರುಣಾಕರ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು , ನನಗೆ ಈಗ 75 ಆಯ್ತು. ಡಯಾಬಿಟಿಕ್ ನಿಂದ 10 ವರ್ಷ ಆಯುಸ್ಸು ಕಡಮೆ ಆಯ್ತು. ಎಷ್ಟು ವರ್ಷ ಬದುಕುತ್ತೇನೋ ಗೊತ್ತಿಲ್ಲ. ಆದರೆ ಜಾಸ್ತಿ ವರ್ಷ ಬದುಕುವ ಆಸೆ ಇದೆ. ಎಲ್ಲರೂ ಆರೋಗ್ಯ ಚೆನ್ನಾಗಿ ಇಟ್ಟು ಕೊಳ್ಳಬೇಕು. ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನಿಡಿದರು.