ಶಿಕ್ಷಕರ ಸಮಸ್ಯೆಗಳನ್ನು ಆಲಿಸಲು ‘ಶಿಕ್ಷಕ ಮಿತ್ರ’ ಆ್ಯಪ್, ಸರಕಾರಿ ಶಾಲೆಗಳ ನೆರವಿಗೆ ಮುಂದಾಗುವ ದಾನಿಗಳಿಗಾಗಿ ‘ನನ್ನ ಶಾಲೆ ನನ್ನ ಕೊಡುಗೆ’ ಆ್ಯಪ್ ಮತ್ತು ವಿದ್ಯಾರ್ಥಿಗಳ ಪರೀಕ್ಷಾ ಸಂಬಂಧ ಸಮಸ್ಯೆಗಳ ಪರಿಹಾರಕ್ಕೆ ಯೂಟ್ಯೂಬ್ ನಲ್ಲಿ ವಿಡಿಯೋ ರೂಪುಗೊಳ್ಳುತ್ತಿದೆ.
ರಾಜ್ಯದ ಶಿಕ್ಷಕರು ಸಮಸ್ಯೆಗಳ ಪರಿಹಾರಕ್ಕೆ ಕಚೇರಿ ಅಲೆದಾಡುವುದನ್ನು ತಪ್ಪಿಸಲು ಶಿಕ್ಷಕ ಮಿತ್ರ ಆ್ಯಪ್ ಸಿದ್ಧಗೊಳ್ಳುತ್ತಿದ್ದು, ಎಪ್ರಿಲ್ ವೇಳೆಗೆ ಇದು ಲೋಕಾರ್ಪಣೆಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸ ಬಯಸುವ ದಾನಿಗಳಿಗೆ ನನ್ನ ಶಾಲೆ ನನ್ನ ಕೊಡುಗೆ ಆ್ಯಪ್ ರೂಪುಗೊಳ್ಳುತ್ತಿದ್ದು, ರಾಜ್ಯದ ಯಾವ ಸರಕಾರಿ ಶಾಲೆಗೆ ಏನು ಅಗತ್ಯವಿದೆ, ಅಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಮುಂತಾದ ವಿಷಯಗಳು ಈ ಆ್ಯಪ್ ನಲ್ಲಿ ಲಭ್ಯವಿದೆ.
ಅಲ್ಲದೆ ನಿಗದಿತ ವಿಷಯದ ಪಾಠ ಪ್ರವಚನ, ಕಂಪ್ಯೂಟರ್ ತರಬೇತಿಯನ್ನು ನೀಡಲು ಸಹ ಈ ಆ್ಯಪ್ ನಲ್ಲಿ ಅವಕಾಶವಿದ್ದು, ಇದು ಸಹ ಎಪ್ರಿಲ್ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪರೀಕ್ಷಾ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಎದುರಿಸುವ ಅನುಮಾನ, ಗೊಂದಲಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಜ್ಞರು ಮತ್ತು ಅಧಿಕಾರಿಗಳ ಸಂವಾದ ರೂಪದ ಉತ್ತರವುಳ್ಳ ವಿಡಿಯೋ ತಯಾರಾಗುತ್ತಿದ್ದು, ಮುಂದಿನ ಸೋಮವಾರ ಯೂ-ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ.
ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ. ಇಂದು ನಾವು ಕೀ...







