ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ನಾನಾ ಭಾಗಗಳಲ್ಲಿ ೨ನೇ ಹಂತದ ಲಾಕ್ ಡೌನ್ ಗೆ ಸರ್ಕಾರ ಕರೆ ನೀಡಿದೆ.. ಪ್ರಮುಖವಾಗಿ ಕೊರೊನಾ ತನ್ನ ರುದ್ರತಾಂಡವ ತೋರಿರುವ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಭಾಗವನ್ನ ಒಂದು ವಾರದ ಮಟ್ಟಿಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.. ಹೀಗಾಗಿ ಸಿಲಿಕಾನ್ ಸಿಟಿ ಇದೀಗ ಮತ್ತೊಮ್ಮೆ ಸ್ಥಬ್ಧವಾಗಿದೆ. ಲಾಕ್ ಡೌನ್ ಘೋಷಣೆಯಾಗ್ತಿದ್ದಂತೆ ಸಾವಿರಾರು ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳತ್ತ ತೆರಳಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿರುವ ಸೆಕೆಂಡ್ ಟರ್ಮ್ ಲಾಕ್ ಡೌನ್ ನಿಜಕ್ಕೂ ರ‍್ಕ್ ಔಟ್ ಆಗುತ್ತಾ. ಕೊರೊನಾ ಹಾವಳಿ ಇನ್ನಾದ್ರೂ ಕಡಿಮೆಯಾಗುತ್ತಾ ಅನ್ನೋ ಪ್ರಶ್ನೆ ಜನರಲ್ಲಿದೆ. ಬೆಂಗಳೂರು ಲಾಕ್ ಡೌನ್ ಘೋಷಣೆಯಾಗ್ತಿದ್ದಂತೆ ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ಲಾಕ್ ಡೌನ್ ಗೆ ಆಯಾ ಜಿಲ್ಲಾಡಳಿತಗಳು ನಿರ್ಧರಿಸಿವೆೆ.
ಲಾಕ್ ಡೌನ್ ಮಾಡುವುದು ಜಿಲ್ಲಾಡಳಿತಗಳಿಗೆ ಬಿಟ್ಟ ವಿಚಾರವೆಂದು ಈಗಾಗಲೇ ಸಿಎಂ ಬಿಎಸ್ ವೈ ಸಹ ಸ್ಪಷ್ಟ ಪಡಿಸಿದ್ದಾರೆ. ಇತ್ತ ಒಂದು ವಾರದ ಬಳಿಕ ಮತ್ತೆ ಸ್ಥಿತಿಗತಿಗಳ ಅವಲೋಕನದ ಮೇಲೆ ಲಾಕ್ ವಿಸ್ತರಣೆ ಮಾಡುವ ಬಗ್ಗೆಯೂ ಸರ್ಕಾರ ತೀರ್ಮಾನ ತೆಗೆದುಕೊಳ್ಳಬಹುದಾದ ಸಾಧ್ಯತೆಯೂ ಹೆಚ್ಚಾಗಿದೆ. ಸದ್ಯ ಈ ಲಾಕ್ ಡೌನ್ ನಿರ್ಣಯಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಕೆಲವರು ಲಾಕ್ ಡೌನ್ ನಿಂದ ದೈನಂದಿನ ಬದುಕಿಗೆ ಸಮಸ್ಯೆಯಾಗುತ್ತೆ ಅಂದ್ರೆ ಇನ್ನೂ ಕೆಲವರು ಲಾಕ್ ನಿರ್ಧಾರ ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಲಾಕ್ ಡೌನ್ ವೇಳೆ ವೈದ್ಯಕೀಯ ಸೇವೆ, ದಿನಸಿ ವಸ್ತುಗಳ ಪೂರೈಕೆ ಸೇರಿದಂತೆ ಕೇವಲ ತುರ್ತು ಸೇವೆಗಳಿಗೆ ಮಾತ್ರವೇ ಅವಕಾಶವಿರಲಿದೆ.








