Simple suni
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಅವರು ಇಂದು ತಮ್ಮ ಹುಟ್ಟಹಬ್ಬದ ಸಂಭ್ರಮದಲ್ಲಿದ್ದಾರೆ.
34ನೇ ವಸಂತಕ್ಕೆ ಕಾಲಿಟ್ಟಿರುವ ಸಿಂಪಲ್ ಸುನಿ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಇನ್ನೂ ಸುನಿ ಜನ್ಮದಿನಕ್ಕೆ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನ್ ಅವರು ಭರ್ಜರಿ ಗಿಫ್ಟ್ ನೀಡಿದ್ದಾರೆ.
ಚೆನ್ನೈ ಕಾರ್ಪೋರೇಷನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ರಜನಿಕಾಂತ್..!
ಸುನಿ ಸಾರಥ್ಯದಲ್ಲಿ ಮೂಡಿಬರಲಿರುವ ಹೊಸ ಸಿನಿಮಾವನ್ನ ಅನೌನ್ಸ್ ಮಾಡುವ ಮೂಲಕ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ.
ಇನ್ನೂ ಸಿಂಪಲ್ ಸುನಿ ಅವರ ಆಕ್ಷನ್ ಕಟ್ ಹೇಳ್ತಿರುವ ಈ ಹೊಸ ಚಿತ್ರಕ್ಕೆ ‘ರಾಬಿನ್ ಹುಡ್’ ಎಂದು ಟೈಟಲ್ ಇಡಲಾಗಿದೆ.
ಅಲ್ಲದೇ ಚಿತ್ರದ ಫಸ್ಟ್ ಸಹ ಲುಕ್ ರಿಲೀಸ್ ಮಾಡಲಾಗಿದ್ದು, ಟೈಟಲ್ ಹಾಗೂ ಫಸ್ಟ್ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಆದ್ರೆ ಬಿಡುಗಡೆಯಾಗಿರುವ ಫಸ್ಟ್ ನಲ್ಲಿ ಇರುವ ನಟ ಯಾರು ಎನ್ನುವುದನ್ನ ಸಿನಿತಂಡ ಇನ್ನೂ ರಿವೀಲ್ ಮಾಡಿಲ್ಲ.
ಕನ್ನಡಕ್ಕೆ ತೆಲುಗಿನ ‘ಎವರು’ ರೀಮೇಕ್ : ಮುಖ್ಯಭೂಮಿಕೆಯಲ್ಲಿ ದಿಗಂತ್, ಹರಿಪ್ರಿಯಾ, ಪ್ರಭು
ಹೀಗಾಗಿ ಚಿತ್ರದ ನಾಯಕ ಯಾರಿರಬಹುದೆಂಬ ಕುತೂಹಲ ಸಿನಿಪ್ರಿಯರನ್ನ ಕಾಡುತ್ತಿದೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಪಲ್ ಸುನಿ ಅವರು ‘ನನ್ನ 34ನೇ ಹುಟ್ಟುಹಬ್ಬದ ದಿನ.
ಮತ್ತೊಂದು ಕನಸಿನ ಕೂಸು ಅನಾವರಣಗೊಂಡಿದೆ. ನಿಮ್ಮ ಆಶೀರ್ವಾದ ಹಾರೈಕೆಗಳು.
ಸದಾ ನನ್ನ ಮೇಲಿರಲಿ. ಧನ್ಯವಾದಗಳು.’ ಎಂದು ಬರೆದುಕೊಂಡಿದ್ದಾರೆ.
ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡುತ್ತಿದ್ದಾರೆ.

ಇನ್ನೂ ಈಗಾಗಲೇ ಸುನಿ ಮತ್ತು ಪುಷ್ಕರ್ ಕಾಂಬಿನೇಷನ್ ನಲ್ಲಿ ‘ಅವತಾರ್ ಪುರುಷ’ ಸಿನಿಮಾ ಮೂಡಿ ಬರುತ್ತಿದೆ.
ಈಗ ಮತ್ತದೆ ಕಾಂಬಿನೇಷನ್ ನ ‘ರಾಬಿನ್ ಹುಡ್’ ಸಹ ಅಭಿಮಾನಿಗಳ ಮುಂದೆ ಬರುತ್ತಿದೆ.
ಸದ್ಯ ಸುನಿ ಅವರು ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಅವತಾರ್ ಪುರುಷ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Simple suni
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








