ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ರಾಜ್ಯದ 90 ಪ್ರದೇಶಗಳ ಮೇಲೆ ಸುಮಾರು 200ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 17 ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಒಟ್ಟು 17 ಅಧಿಕಾರಿಗಳಿಗೆ ಸಂಬಂಧಿಸಿದಂತೆ ಒಟ್ಟು 75 ಪ್ರದೇಶಗಳ ಮೇಲೆ ದಾಳಿ ನಡೆದಿದೆ. ಒಟ್ಟು 250 ಅಧಿಕಾರಿಗಳು ತಂಡದಿಂದ ದಾಳಿ ನಡೆಸಲಾಗಿದೆ.
ಕೆಆರ್‌ಪುರದಲ್ಲಿ ಆರ್‌ಟಿಓ ಅಧಿಕಾರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು (Officers) ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮನೆ, ಕಚೇರಿ ಸೇರಿದಂತೆ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಾಲಿಕೆ ಎಆರ್‌ಓ ಚಂದ್ರಪ್ಪ ಮನೆ ಮೇಲೆಯೂ ದಾಳಿ ನಡೆಸಲಾಗಿದೆ. ಚಂದ್ರಪ್ಪಗೆ ಸೇರಿದ ಮೂರು ಸ್ಥಳಗಳ ದಾಳಿ ನಡೆಸಲಾಗಿದೆ. ಆರ್‌ಆರ್ ನಗರ ವಲಯ ಹೆಗ್ಗನಹಳ್ಳಿ ವಾರ್ಡ್ ಎಆರ್‌ಓ ಚಂದ್ರಪ್ಪ ಲಂಚ ಪಡೆಯುವ ಸಂದರ್ಭದಲ್ಲಿಯೇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಕಾರ್ಮಿಕ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಶ್ರೀನಿವಾಸ್ ಸೇರಿದಂತೆ ನಗರದಲ್ಲಿ 9 ಕಡೆ ದಾಳಿ ನಡೆಸಲಾಗಿದ್ದು, ವಿವಿಧ ಜಿಲ್ಲೆಗಳಲ್ಲಿಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.