ಪಿ ಯು ಕಾಲೇಜುಗಳಲ್ಲಿ ಸೂರ್ಯನಮಸ್ಕಾರಕ್ಕೆ ಕೇಂದ್ರ ಶಿಕ್ಷಣ ಇಲಾಖೆ ಸೂಚನೆ
ಜನವರಿ 1 ರಿಂದ ಎಲ್ಲಾ ಪದವಿ ಪೂರ್ವ ( ಪಿ ಯು ) ಕಾಲೇಜುಗಳಲ್ಲಿ ಸೂರ್ಯನಮಸ್ಕಾರ ಹಮ್ಮಿಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವಲಯ ರಾಜ್ಯಗಳಿಗೆ ಸೂಚನೆ ನೀಡಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜನವರಿ 1 ರಿಂದ ಫೆಬ್ರವರಿ 7 ರ ವರೆಗೆ ಸಂಗೀತದೊಂದಿಗೆ ಸೂರ್ಯನಮಸ್ಕಾರ ಯೋಗಾಭ್ಯಾಸವನ್ನ ಹಮ್ಮಿಕೊಳ್ಳುವಂತೆ ರಾಜ್ಯ ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ಕೇಂದ್ರ ಸಚಿವಾಲಯ ಪತ್ರ ಬರೆದು ತಿಳಿಸಿದೆ.
ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಕಾಲೇಜುಗಳಿಗೆ ಸೂಚನೆ ನಿಡಿದ್ದು, ಪ್ರಾಂಶುಪಾಲರು ಉಪನ್ಯಾಸಕರು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಮತ್ತು ಮಾಹಿತಿ ಯನ್ನ ಇಲಾಖೆಗೆ ಸಲ್ಲಿಸುವಂತೆ ತಿಳಿಸಿದೆ.
ವಿದ್ಯಾರ್ಥಿಗಳ ಆರೋಗ್ಯ ವೃದ್ದಿ ಮನೋಬಲ ಹೆಚ್ಚಳಕ್ಕೆ ಸೂರ್ಯ ನಮಸ್ಕಾರ ಸಹಕಾರಿಯಾಗುತ್ತದೆ ಎಂದು ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿದೆ.








