Sindhu : ಪ್ರತಿಷ್ಠಿತ BWF ಟೂರ್ನಿಯಿಂದ ಹೊರನಡೆದ ಪಿ.ವಿ ಸಿಂಧು..!!
ಮುಂದಿನ ತಿಂಗಳು ಡಿ.14ರಿಂದ ಚೀನಾದಲ್ಲಿ ನಡೆಯಲಿರುವ ಪ್ರತಿಷ್ಠಿತ BWF ಟೂರ್ನಿಯಿಂದ ಪಿ.ವಿ ಸಿಂಧು ಹೊರನಡೆದಿದ್ದಾರೆ.. ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ..
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು BWF ಟೂರ್ನಮೆಂಟ್ ನಲ್ಲಿ ಆಡದೇ ಇರಲು ಕಾರಣ ಅವರ ಇಂಜ್ಯುರಿ..
ಕಳೆದ ಆಗಸ್ಟ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಸಿಂಧು ಆ್ಯಂಕಲ್ ಫ್ರಾಕ್ಚರ್ಗೆ ಗುರಿಯಾಗಿದ್ದರು.
ಆಗಿನಿಂದ ಸಿಂಧು ಯಾವ ಟೂರ್ನಿಯಲ್ಲೂ ಆಡಿಲ್ಲ. ಈ ಬಾರಿಯ ಬಿಡಬ್ಲ್ಯುಎಫ್ ಟೂರ್ನಿಯಲ್ಲಿ ವಿಶ್ವದ ಟಾಪ್ 8 ಆಟಗಾರ್ತಿಯರು ಆಡುತ್ತಿದ್ದಾರೆ.
ಸಿಂಧು ಕೂಡ ಈ ಟೂರ್ನಿಗೆ ಅರ್ಹತೆ ಪಡೆದಿದ್ದರು. ಆದರೆ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಬಿಡಬ್ಲ್ಯುಎಫ್ ಟೂರ್ನಿಯಲ್ಲಿ ಆಡಲು ಆಗುತ್ತಿಲ್ಲ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ಗೆ ಪತ್ರ ಬರೆದಿದ್ದಾರೆ.
ಸಿಂಧು ಗಾಯದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದು ವರ್ಷದ ಕೊನೆಯ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದಾರೆ.