ಇತ್ತೀಚಿನ ದಿನಗಳಲ್ಲಿ ಹಲವರಿಗೆ ಮಾನವೀಯತೆ ಹಾಗೂ ಕರುಳ ಬಳ್ಳಿಯೇ ಇಲ್ಲದಂತಾಗಿದೆ. ವಯಸ್ಸಾದ ತಾಯಿ-ತಂದೆಯನ್ನು ಪ್ರೀತಿಯಿಂದ ಕಾಣುವ ಮಕ್ಕಳ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಇದು ತುಂಬಾ ನೋವಿನ ಸಂಗತಿ. ಇಲ್ಲೊಬ್ಬ ಪಾಪಿ ತನ್ನ ತಂದೆ-ತಾಯಿಯನ್ನು ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆಯೊಂದು ನಡೆದಿದೆ.
The incident in Srinagar, captured in this viral video, is a tragic reflection of how far we have fallen. A son mercilessly beating his parents serves as a stark reminder that Qayamat may not be far. Our faith teaches us that a father is the gateway to Jannah, and 1/2 pic.twitter.com/S7nImyg5kM
— Pirzada Shakir (@pzshakir6) September 7, 2024
ಕಾಶ್ಮೀರದ ಶ್ರೀನಗರದಲ್ಲಿ ಈ ಘಟನೆ ನಡೆದಿದೆ. ಪುತ್ರನೊಬ್ಬ ತನ್ನ ಹೆತ್ತ-ತಂದೆ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ. ಮೊಹಮ್ಮದ್ ಅಶ್ರಫ್ ವಾನಿ ಎಂಬ ವ್ಯಕ್ತಿ ತನ್ನ ತಾಯಿ ತಾಜಾ ಬೇಗಂ ಮತ್ತು ತಂದೆ ಗುಲಾಮ್ ಅಹ್ಮದ್ ವಾನಿ ಮೇಲೆ ನಡು ರಸ್ತೆಯಲ್ಲಿಯೇ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಯಾವ ಕಾರಣಕ್ಕೆ ಹಲ್ಲೆ ನಡೆಸಿದ್ದಾನೆ ಎಂಬುವುದು ಮಾತ್ರ ತಿಳಿದಿಲ್ಲ. ಆದರೆ, ಆರೋಪಿ ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತ ವಿಡಿಯೋವನ್ನು ಪಿರ್ಝಾದಾ ಶಕೀರ್ (Pirzada Shakir) ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಬೀದಿ ಬದಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ತಂದೆ-ತಾಯಿಯನ್ನು ಕಂಡ ಮೊಹಮ್ಮದ್ ಅಶ್ರಫ್ ಬೈಕ್ ನಿಲ್ಲಿಸಿ, ಚಪ್ಪಲಿಯಿಂದ ಹೆತ್ತವರಿಗೆ ಮನಬಂದಂತೆ ಥಳಿಸುವ ದೃಶ್ಯ ಕಾಣಬಹುದು. ನಂತರ ಸ್ಥಳೀಯರಿಬ್ಬರು ಬಂದು ಮಗನ ಕ್ರೌರ್ಯದಿಂದ ವಯಸ್ಸಾದ ತಂದೆ-ತಾಯಿಯನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.