ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಮತ್ತೆ ಗಂಭೀರ.
ಚೆನ್ನೈ, ಸೆಪ್ಟೆಂಬರ್24: ಜನಪ್ರಿಯ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಮತ್ತೆ ಬಿಗಡಾಯಿಸಿದೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದು ವೆಂಟಿಲೇಟರ್ ಅನ್ನು ಅಳವಡಿಸಲಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಸೆಪ್ಟೆಂಬರ್ 24 ರಂದು ತಿಳಿಸಿದೆ.
ಎಸ್ಪಿಬಿ ಎಂದು ಜನಪ್ರಿಯರಾಗಿರುವ ಬಾಲಸುಬ್ರಹ್ಮಣ್ಯಂ ಅಗಸ್ಟ್ 5 ರಂದು ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ಪಿಬಿ ಅವರಿಗೆ ಎಸಿಎಂಒ (ಎಕ್ಸ್ಟ್ರಾ ಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜೆನೇಷನ್) ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಹೃದಯ ಮತ್ತು ಶ್ವಾಸಕೋಸ ತೊಂದರೆ ಇರುವವರಿಗೆ ಎಸಿಎಂಒ ಚಿಕಿತ್ಸೆ ನೀಡಲಾಗುತ್ತದೆ.
ಕಳೆದ 24 ಗಂಟೆಗಳಲ್ಲಿ ಅವರ ಸ್ಥಿತಿಯು ಮತ್ತಷ್ಟು ಹದಗೆಟ್ಟಿದೆ ಮತ್ತು ಅವರು ಅತ್ಯಂತ ಗಂಭೀರವಾಗಿದೆ ಎಂದು ಎಂಜಿಎಂ ಹೆಲ್ತ್ಕೇರ್ನ ಸಹಾಯಕ ನಿರ್ದೇಶಕ (ವೈದ್ಯಕೀಯ ಸೇವೆಗಳು) ಡಾ.ಅನುರಾಧಾ ಬಾಸ್ಕರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








