ಹಾಡು ಹಾಡಿದಕ್ಕೆ ವ್ಯಕ್ತಿಯನ್ನ ಕೊಂದ ಕಿಡಿಗೇಡಿ
ಮುಂಬೈ : ಜೋರಾಗಿ ಹಾಡು ಹಾಕಿದ ಕಾರಣಕ್ಕೆ 40 ವರ್ಷದ ವ್ಯಕ್ತಿಯನ್ನ ನೆರಮನೆಯಾತನೇ ಕೊಲೆಗೈದಿರುವ ಘಟನೆ ಮಾಯಾನಗರಿ ಮುಂಬೈನಲ್ಲಿ ನಡೆದಿದೆ..
ಸುರೇಂದ್ರ ಕುಮಾರ್ ಗುನ್ನಾರ್ ಮೃತನಾಗಿದ್ದು, ನೆರೆ ಮನೆಯ ಸೈಫ್ ಅಲಿ ಚಂದ್ ಅಲಿ ಶೇಖ್ ಎಂಬಾತನನ್ನ ಆರೋಪಿಯೆಂದು ಗುರುತಿಸಲಾಗಿದೆ. ಮುಂಬೈನ ಮಲ್ವಾನಿಯ ಅಂಬುಜ್ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸುರೇಂದ್ರ ಕುಮಾರ್ ಗುನ್ನಾರ್ ತಮ್ಮ ಮನೆಯ ಹೊರಗೆ ಕುಳಿತು ರೆಕಾರ್ಡರ್ ನಲ್ಲಿ ಜೋರಾಗಿ ಹಾಡು ಹಾಕಿಕೊಂಡು ಕೇಳುತ್ತಿದ್ದರು. ಆಗ ಈ ಶಬ್ದದಿಂದ ಕಿರಿಕಿರಿ ಅನುಭವಿಸುತ್ತಿದ್ದ ಅವರ ನೆರೆಮನೆಯ ಸೈಫ್ ಮೊದಲಿಗೆ ಸೌಂಡ್ ಕಡಿಮೆ ಮಾಡಲು ಸುರೇಂದ್ರಗೆ ಸೂಚಿಸಿದ್ದ. ಆದರೆ ಸುರೇಂದ್ರ ಅವನ ಮಾತನ್ನ ತಿರಸ್ಕರಿಸಿ ಹಾಡು ಕೇಳುತ್ತಾ ಕುಳಿತಿದ್ದ.
ಪತ್ನಿಯ ತಲೆ ಕಡಿದು ಪೊಲೀಸ್ ಠಾಣೆಗೆ ಕೊಂಡೊಯ್ದ ಪತಿ
ಇದ್ರಿಂದ ಸಿಟ್ಟಾಗಿ ಶೇಖ್ ಸುರೇಂದ್ರನನ್ನು ಹೊಡೆದು ನೆಲಕ್ಕೆ ತಳ್ಳಿದ್ದಾನೆ. ಬಿದ್ದ ರಭಸಕ್ಕೆ ತೀವ್ರ ಗಾಯಗೊಂಡಿದ್ದ ಸುರೇಂದ್ರ ಕುಮಾರ್ ಪ್ರಜ್ಞೆ ತಪ್ಪಿ ಬಿದ್ದಿದ್ದ. ಅತಿಯಾದ ರಕ್ತಸ್ರಾವ ಉಂಟಾಗಿತ್ತು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವಿಗೀಡಾಗಿದ್ದಾರೆ..
ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.