ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನ ನಿಷೇಧ
ನವದೆಹಲಿ : ಕೇಂದ್ರ ಪರಿಸರ ಸಚಿವಾಲಯದಿಂದ ಪ್ಲಾಸ್ಟಿಕ್ ಬಳಕೆ ಮೇಲೆ ಹೊಸ ರೂಲ್ಸ್ ಜಾರಿ ಮಾಡಿದ್ದು, ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದೆ.
ಕೇಂದ್ರ ಪರಿಸರ ಸಚಿವಾಲಯವು 2022ರ ಒಳಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮಗಳನ್ನು ಜಾರಿಗೊಳಿಸಿದೆ.
ಇದರ ಅನ್ವಯ 2021ರ ಸೆಪ್ಟೆಂಬರ್ 30ರಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳ ಗಾತ್ರವನ್ನು 50 ರಿಂದ 75 ಮೈಕ್ರಾನ್ ಗಳಿಗೆ ಮತ್ತು 120 ಮೈಕ್ರಾನ್ ಗಳಿಗೆ ಹೆಚ್ಚಿಸಲಾಗುತ್ತಿದೆ. ಇದರಿಂದ ಬ್ಯಾಗ್ ಗಳನ್ನು ಮರುಬಳಸಬಹುದು ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೆ 2022ರ ಜುಲೈ 1ರಿಂದ ಪಾಲಿಸ್ಟೈರಿನ್ ನಂತಹ ಸಿಂಗಲ್ ಯೂಸ್ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗುತ್ತಿದೆ.
ಜೊತೆಗೆ ಪ್ಲಾಸ್ಟಿಕ್ ಇಯರ್ ಬಡ್ಸ್, ಪ್ಲಾಸ್ಟಿಕ್ ಧ್ವಜ, ಸ್ಪೂನ್ ಗಳು, ಚಾಕು, ಸ್ಟ್ರಾ, ಟ್ರೇಗಳು, ಸ್ವೀಟ್ ಬಾಕ್ಸ್, ಆಹ್ವಾನ ಪತ್ರಿಕೆಗಳು ಮತ್ತು ಸಿಗರೇಟ್ ಪ್ಯಾಕ್, ಪಿವಿಸಿ ಬ್ಯಾನರ್ ಗಳಲ್ಲಿ 100 ಮೈಕ್ರಾನ್ ಗಿಂತ ಕಡಿಮೆ ಪ್ಲಾಸ್ಟಿಕ್ ಗಳನ್ನು ಬಳಸಲಾಗುತ್ತದೆ ಎಂದು ಸಚಿವಾಲಯ ವಿವರಿಸಿದೆ.









