RCB, ವಿರಾಟ್ ಗೆ ಧನ್ಯವಾದ ಹೇಳಿದ ಸಿರಾಜ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಂ ಬ್ಯಾಕ್ ಮಾಡಿ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಆರ್ ಸಿ ಬಿ ಯ ವೇಗಿ ಮೊಹ್ಮದ್ ಸಿರಾಜ್ ಪ್ರಮುಖ ಎರಡು ವಿಕೆಟ್ ಗಳನ್ನು ಪಡೆದುಕೊಂಡರು . ಆ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಂದ್ಯದಲ್ಲಿ ನಾಲ್ಕು ಓವರ್ ಗಳನ್ನು ಎಸೆದ ಸಿರಾಜ್, 31 ರನ್ ನೀಡಿ 2 ವಿಕೆಟ್ ಪಡೆದರು. ಮೊದಲು ಪೃಥ್ವಿ ಶಾಗೆ ಖೆಡ್ಡಾ ತೋಡಿದ ಸಿರಾಜ್ ನಂತರ ನಿರ್ಣಾಯಕ ಹಂತದಲ್ಲಿ ಡೆಲ್ಲಿ ನಾಯಕ ರಿಷಬ್ ಪಂತ್ ವಿಕೆಟ್ ಪಡೆದರು. ಇದು ಪಂದ್ಯಕ್ಕೆ ರೋಚಕ ತಿರುವವನ್ನ ನೀಡಿತು.
ಇನ್ನು ಈ ಪಂದ್ಯಕ್ಕೂ ಮುನ್ನಾ ಮೊಹ್ಮದ್ ಸಿರಾಜ್ ಬ್ಯಾಡ್ ಫಾರ್ಮ್ ನಲ್ಲಿದ್ದರು. ಆಡಿದ ಐದು ಪಂದ್ಯದಲ್ಲಿ ಕೇವಲ ಮೂರು ವಿಕೆಟ್ ಪಡೆದು 210 ಕ್ಕೂ ಅಧಿಕ ರನ್ ಗಳನ್ನ ಬಿಟ್ಟುಕೊಟ್ಟಿದರು.
ಪಂದ್ಯದಿಂದ ಪಂದ್ಯಕ್ಕೆ ಸಿರಾಜ್ ಎಕನಾಮಿ ಕಳಪೆಯಾಗುತ್ತಲೇ ಇತ್ತು. ಹೀಗಾಗಿ ಸಿರಾಜ್ ಅವರನ್ನು ತಂಡದಿಂದ ಕೈ ಬಿಡಬೇಕು ಅನ್ನುವ ಮಾತುಗಳು ಕೇಳಿ ಬಂದಿದ್ದವು.
ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಕಂ ಬ್ಯಾಕ್ ಮಾಡಿದ್ದು, ತಂಡಕ್ಕೆ ಪ್ಲಾಸ್ ಪಾಯಿಂಟ್ ಆಗಿದೆ.
ಇನ್ನು ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮಿನಲ್ಲಿ ಮ್ಯಾಚ್ ಬಗ್ಗೆ ಮಾತನಾಡಿದ ಸಿರಾಜ್, ಮಂಜಿನ ನಡುವೆಯೂ ಚೆಂಡು ವಿಕೆಟ್ ಮೇಲೆ ಹಾಕಿದಾಗ ಗ್ರಿಪ್ ಸಿಗುತ್ತಿತ್ತು.
ಹೀಗಾಗಿ ಫಾಫ್ ಜೊತೆ ಮಾತನಾಡಿ ಪ್ಲಾನ್ ಮಾಡಿ ಪೃಥ್ವಿ ಶಾ ವಿಕೆಟ್ ಪಡೆದೆ. ತುಂಬಾ ದಿನಗಳ ನಂತರ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದು, ಖುಷಿ ಕೊಡುತ್ತಿದೆ.
ಆರ್ ಸಿಬಿಗಾಗಿ 50 ಪಂದ್ಯಗಳನ್ನಾಡಿದ್ದು ಖುಷಿ ಕೊಡುತ್ತಿದೆ. ನನಗೆ ಆರ್ ಸಿಬಿ ಮ್ಯಾನೆಜ್ ಮೆಂಟ್ ಮತ್ತು ವಿರಾಟ್ ಕೊಹ್ಲಿ ತುಂಬಾ ಸಹಕಾರ ಕೊಟ್ಟಿದ್ದಾರೆ ಎಂದಿದ್ದಾರೆ.









