ಸಿರಿಯಾದ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ: 13 ಮಂದಿ ಸಾವು
ಸಿರಿಯಾ : ಸಿರಿಯಾದಲ್ಲಿ ಆತಂಕವಾದಿಗಳ ಅಟ್ಟಹಾಸ ಮುಂದುವರೆದಿದೆ.. ಉತ್ತರ ಸಿರಿಯಾದ ಆಸ್ಪತ್ರೆಯೊಂದರ ಮೇಲೆ ಇದೀಗ ಕ್ಷಿಪಣಿ ದಾಳಿ ನಡೆದಿದ್ದು, ಇದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಮದು ತಿಳಿದುಬಂದಿದೆ. ಆಫ್ರಿನ್ ಪಟ್ಟಣದಲ್ಲಿರುವ ಅಲ್-ಶಿಫಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು 2 ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಆಸ್ಪತ್ರೆ ಸಿಬ್ಬಂದಿ, ಆಂಬುಲೆನ್ಸ್ನ ಇಬ್ಬರು ಚಾಲಕರು ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದಾರೆ. ಪಾಲಿಕ್ಲಿನಿಕ್ ವಿಭಾಗ, ತುರ್ತು ಪರಿಸ್ಥಿತಿ ಹಾಗೂ ವಿತರಣಾ ಕೊಠಡಿ ನಾಶಗೊಂಡಿವೆ. ಆಸ್ಪತ್ರೆಯಿಂದ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಪಡೆ ಮತ್ತು ಕುರ್ದಿಶ್ ಸಮೂಹ ನಿಯೋಜನೆಗೊಂಡಿರುವ ಪ್ರದೇಶದಿಂದ ಈ ದಾಳಿ ನಡೆದಿದೆ. ಆದ್ರೆ ಈ ದಾಳಿಯನ್ನು ಯಾರು ನಡೆಸಿದ್ದಾರೆ ಎಂಬುದರ ಬಗ್ಗೆ ಇನ್ನೂವರೆಗೂ ನಿಖರ ಮಾಹಿತಿ ಲಭ್ಯವಿಲ್ಲ. ಆಸ್ಪತ್ರೆಯ ಮೇಲೆ ಶನಿವಾರ ರಾಕೆಟ್ ಮತ್ತು ಫಿರಂಗಿ ಶೆಲ್ ಗಳ ದಾಳಿ ನಡೆದಿದೆ. ಇದರಲ್ಲಿ 13 ಮಂದಿ ಮೃತಪಟ್ಟಿದ್ದು, 27 ಮಂದಿಗೆ ಗಾಯಗಳಾಗಿವೆ. ಈ ದಾಳಿಯನ್ನು ಸಿರಿಯಾದ ಕುರ್ದಿಶ್ ಸಮೂಹ ನಡೆಸಿದೆ ಎಂದು ಟರ್ಕಿಯ ಹತಯಾಸ್ ಪ್ರಾಂತ್ಯದ ಗವರ್ನರ್ ದೂರಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.