ಬೆಳಗಾವಿ: ಖ್ಯಾತ ಗೀತ ಸಾಹಿತಿ ಕೆ.ಕಲ್ಯಾಣ್ (K Kalyan family) ಸಂಸಾರದಲ್ಲಿ ಹುಳಿ ಹಿಂಡಿ ಲಕ್ಷಾಂತರ ರೂ. ಲಪಟಾಯಿಸಿದ್ದ ಮಂತ್ರವಾದಿ ಶಿವಾನಂದ ವಾಲಿ(Sivananda vali ) ಜನರಿಗೆ ಮಾಟಮಂತ್ರ ಎಂದು ಹೆದರಿಸಿ ಭೂತ ಚೇಷ್ಟೆ ಬಿಡಿಸುವ ನೆಪದಲ್ಲಿ ಕೋಟಿ ಕೋಟಿ ಆಸ್ತಿ, ನಗದು, ಚಿನ್ನ ಲಪಟಾಯಿಸಿರುವ ಬಗ್ಗೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಬರೀ ಮಾಟಮಂತ್ರವಲ್ಲದೆ ವಂಚನೆ ಹಾಗೂ ಅಪಹರಣ ಪ್ರಕರಣದಲ್ಲೂ ಶಿವಾನಂದ ವಾಲಿ ಆರೋಪಿಯಾಗಿದ್ದಾನೆ. ಬೆಳಗಾವಿ ಪೊಲೀಸರು ಶಿವಾನಂದ ವಾಲಿ ವಿಚಾರಣೆ ನಡೆಸಿದಾಗ ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ ನಗರ ಸೇರಿದಂತೆ ಐದರಿಂದ ಆರು ಕೋಟಿ ರೂಪಾಯಿ ಸ್ಥಿರಾಸ್ತಿ ಹಾಗೂ ನಗದು, ಆಭರಣ ಹೊಂದಿರುವ ಸಂಗತಿ ಬೆಳಕಿಗೆ ಬಂದಿದೆ.

ಕೆ. ಕಲ್ಯಾಣ್ ಪತ್ನಿಗೆ ಕಂಟಕ ಇದೆ, ಸರಿಪಡಿಸುವೆ ಎಂದು ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ಬಳಸಿಕೊಂಡು ಹಣ ಲಪಟಾಯಿಸಿದ್ದ. ಇಲ್ಲಿಯವರೆಗೆ 350 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ ನಗರ ಸೇರಿದಂತೆ ಐದರಿಂದ ಆರು ಕೋಟಿ ರೂಪಾಯಿ ಆಸ್ತಿ ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಬಹಿರಂಗವಾಗಿದ ಎಂದು ಬೆಳಗಾವಿಯ ಕಾನೂನು ಸುವ್ಯವಸ್ಥೆಯ ಡಿಸಿಪಿ ಡಾ.ವಿಕ್ರಮ್ ಆಮಟೆ
ಮಾಹಿತಿ ನೀಡಿದ್ದಾರೆ.

ಶಿವಾನಂದ ವಾಲಿ ತನ್ನ ಮೈಮೇಲೆ ದೇವರು ಬರುತ್ತದೆ ಎಂದು ಕಲ್ಯಾಣ್ ಪತ್ನಿ ಹಾಗೂ ಮಾವನ ಆಸ್ತಿ ಬರೆಯಿಸಿಕೊಂಡಿದ್ದ. ಶಿವಾನಂದ ವಾಲಿ ವಿರುದ್ಧದ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಇನ್ನೆಷ್ಟು ಆಸ್ತಿ ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಪ್ರಕರಣದ ಮತ್ತೊರ್ವ ಆರೋಪಿ ಗಂಗಾ ಕುಲಕರ್ಣಿ ಇತರರು ಪತ್ತೆ ಹೆಚ್ಚಬೇಕಿದೆ. ಆ ನಂತರ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ಡಿಸಿಪಿ ಡಾ.ವಿಕ್ರಮ್ ಆಮಟೆ ತಿಳಿಸಿದ್ದಾರೆ.
ಸಾರ್ವಜನಿಕರು ಇಂಥ ಮಾಟ ಮಂತ್ರ ಮಾಡುವುದಾಗಿ ಹೇಳುವವರ ಬಗ್ಗೆ ಅನುಮಾನ ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಡಾ.ವಿಕ್ರಮ್ ಆಮಟೆ ಮನವಿ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








