SLvsIND 3rd T20i | ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ
ಧರ್ಮಶಾಲಾದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 3 ನೇ ಟಿ 20 ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತ ತಂಡದಲ್ಲಿ ನಿರೀಕ್ಷೆಯಂತೆ ನಾಲ್ಕು ಬದಲಾವಣೆಗಳಾಗಿವೆ. ಇಶಾನ್ ಕಿಶಾನ್ ಗೆ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ದೂರ ಉಳಿದಿದ್ದಾರೆ.
ಬುಮ್ರಾ, ಭುವನೇಶ್ವರ್, ಯಜುವೇಂದ್ರ ಚಹಾಲ್ ಅವರಿಗೆ ರೆಸ್ಟ್ ನೀಡಲಾಗಿದೆ.
ಇವರ ಬದಲಿಗೆ ರವಿ ಬಿಷ್ನೋಯಿ, ಕುಲ್ ದೀಪ್ ಯಾದವ್, ಆವೇಶ್ ಖಾನ್, ಸಿರಾಜ್ ಗೆ ಅವಕಾಶ ನೀಡಲಾಗಿದೆ.
ರೋಹಿತ್ ಶರ್ಮಾ ಜೊತೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಓಪನ್ ಮಾಡುವ ಸಾಧ್ಯತೆಗಳಿವೆ.
ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಟಿಂ ಇಂಡಿಯಾ ಈಗಾಗಲೇ 2-0 ಅಂತರದೊಂದಿಗೆ ಸರಣಿ ಗೆದ್ದಿದೆ.
ತಂಡಗಳು ಹೀಗಿವೆ.
ಭಾರತ : ರೋಹಿತ್ ಶರ್ಮಾ(c), ಸಂಜು ಸ್ಯಾಮ್ಸನ್(w), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಅವೇಶ್ ಖಾನ್
ಶ್ರೀಲಂಕಾ : ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಚರಿತ್ ಅಸಲಂಕ, ದಿನೇಶ್ ಚಂಡಿಮಲ್ (ಪ), ಜನಿತ್ ಲಿಯಾನಗೆ, ದಸುನ್ ಶನಕ (ಸಿ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಜೆಫ್ರಿ ವಾಂಡರ್ಸೆ, ಬಿನೂರ ಫೆರ್ನಾಂಡೋ, ಲಹಿರು ಕುಮಾರ
SLvsIND 3rd T20i Sri Lanka opt to bat