ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ (Team India) ಮಾಜಿ ಆಟಗಾರ ಅನಿಲ್ ಕುಂಬ್ಳೆ (Anil Kumble) ಅವರು ಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಬೆಂಗಳೂರಿನ ಸದಾಶಿವ ನಗರದ ಎಸ್.ಎಂ. ಕೃಷ್ಣ (SM Krishna) ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಅವರು ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬೆಂಗಳೂರನ್ನು ಅವರು ಮಾದರಿಯಾಗಿ ಮಾಡಿದ್ದಾರೆ.
ಕ್ರೀಡೆಗೂ ತುಂಬಾ ಪ್ರೋತಾಹ ನೀಡುತ್ತಿದ್ದರು. ಅವರ ಅಗಲಿಕೆ ತುಂಬಾ ನೋವು ನೀಡಿದೆ. ನಮ್ಮೊಂದಿಗೆ ಕುಟುಂಬ ಸದಸ್ಯರಂತೆ ಇದ್ದರು ಎಂದಿದ್ದಾರೆ.








