ಗುಜರಾತ್ ಚುನಾವಣಾ ಪ್ರಚಾರದಲ್ಲಿ ಪಾನಿ ಪೂರಿ ಸವಿದ ಸ್ಮೃತಿ ಇರಾನಿ…
ಗುಜರಾತ್ ಚುನಾವಣಾ ಪ್ರಚಾರದ ಅಂಗವಾಗಿ ಎಲ್ಲಾ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರನ್ನ ಗುಜರಾತ್ ಗೆ ಕಳುಹಿಸುತ್ತಿದ್ದಾರೆ. ಒಂದೆಡೆ ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಜರಾತ್‌ನಲ್ಲಿ ನಿರಂತರವಾಗಿ ರ್ಯಾಲಿ ನಡೆಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿಯ ಎಲ್ಲಾ ನಾಯಕರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.
ಈ ನಡುವೆ ಚುನಾವಣಾ ಪ್ರಚಾರಕ್ಕಾಗಿ ಗುಜರಾತ್‌ಗೆ ಆಗಮಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಸ್ಮೃತಿ ಇರಾನಿ ಅಂಗಡಿಯೊಂದರಲ್ಲಿ ಪಾನಿ ಪೂರಿ ತಿನ್ನುತ್ತಿದ್ದಾರೆ.
ಪಕ್ಷದ ಪರ ಪ್ರಚಾರ ಮಾಡಲು ಗುಜರಾತ್‌ನ ಆನಂದ್ ಗೆ ಆಗಮಿಸಿದ ಸ್ಮೃತಿ ಇರಾನಿ, ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ರಸ್ತೆ ಬದಿಯಲ್ಲಿರುವ ಗೋಲ್ಗಪ್ಪ ಅಂಗಡಿ ತಲುಪಿದರು. ಈ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸ್ಮೃತಿ ಇರಾನಿ ಪಾನಿ ಪೂರಿ ರುಚಿ ಸವಿದಿದ್ದಾರೆ.
ಸ್ಮೃತಿ ಇರಾನಿಯವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Smriti Irani : Smriti Irani tasted pani puri in Gujarat election campaign…








